

ಧಾರವಾಡ: ಉತ್ತರ ಕರ್ನಾಟಕದ ಜನಪದ ಗೀತ ಸಂಪ್ರದಾಯದಲ್ಲಿ ೬೫ಕ್ಕೂ ಹೆಚ್ಚು ಪ್ರಕಾರಗಳಿವೆ. ವಿಶಿಷ್ಟ ವಾದ್ಯಗಳ ಮೂಲಕ ಹಾಡುತ್ತ ಮನರಂಜನೆಯ ಮÁಧ್ಯಮವಾಗಿ ಜನಪದವು ಆಗಿನ ಪ್ರಬಲ ಮÁಧ್ಯಮವಾಗಿತ್ತು. ಆದರೆ, ಜಾಗತೀಕರಣದ ನೆಲೆಯಲ್ಲಿ ಜನಪದ ಸಾಹಿತ್ಯ, ಕಲೆ, ಸಂಪ್ರದಾಯಗಳು ಅವನತಿಯ ಹಾದಿ ಹಿಡಿದಿವೆ. ಉತ್ತರ ಕರ್ನಾಟಕದ ಜನಪದ ಪರಂಪರೆಗೆ ಕಾಯಕಲ್ಪ ಅಗತ್ಯ ಎಂದು ಹಿರಿಯ ಜನಪದ ಕಲಾವಿದ ಚನ್ನಪ್ಪ ಬೆಂಗೇರಿ ಹೇಳಿದರು.
ಹುಬ್ಬಳ್ಳಿಯ ಕರ್ನಾಟಕ ಜಾನಪದ ಪರಿಷತ್, ಶರಣ ಸಾಹಿತ್ಯ ಪರಿಷತ್, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಹಾಗೂ ಜೀವಿ ಕಲಾ ಬಳಗದ ಆಶ್ರಯದಲ್ಲಿ ನಗರದ ನಿಸರ್ಗ ಬಡಾವಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ `ಮನೆಮನೆಯಲ್ಲಿ ಶ್ರಾವಣ ಜಾನಪದ' ಕಾರ್ಯಕ್ರಮ ಉದ್ಘಾಟಿಸಿ ಅವರು ಮÁತನಾಡಿದರು.
ನಮ್ಮ ಸಂಸ್ಕೃತಿಯ ಪ್ರತೀಕವಾದ ಜನಪದ ಪರಂಪರೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರಾವಣ ಮÁಸದಾದ್ಯಂತ ಹುಬ್ಬಳ್ಳಿ- ಧಾರವಾಡದ ಮನೆಮನೆಯಲ್ಲಿ ಆಯೋಜಿಸಿರುವುದು ಶ್ಲಾಘನೀಯ ಎಂದರು.
ವಿದ್ವಾAಸ ಡಾ. ಶ್ರೀಶೈಲ ಹುದ್ದಾರ ಮಾತನಾಡಿ, ಜನಪದದ ಧಾಟಿಯ ಮೂಲ ಸಾಹಿತ್ಯವನ್ನು ಬದಲಿಸಿ ಟಿವಿ ಮÁಧ್ಯಮಗಳು ಟಿಆರ್ ಪಿ ಸರಕನ್ನಾಗಿಸಿಕೊಂಡು ಅದರಿಂದ ಲಾಭ ಗಳಿಸುವ ಮÁರ್ಗ ಅನುಸರಿಸುತ್ತಿವೆ. ಇದರಿಂದ ಮೂಲ ಜನಪದ ಕಲಾವಿದರಿಗೆ ಸಲ್ಲುವ ಗೌರವ ಕುಂದುತ್ತಿದೆ. ಮನರಂಜನೆಗಾಗಿ ಬಳಸುತ್ತಿದ್ದ ಜಾನಪದಕ್ಕೆ ಆಧುನಿಕ ಕರ್ಕಶ ಸಂಗೀತ ಸೇರಿಸಿ ವ್ಯಾಪಾರದ ಸರಕನ್ನಾಗಿಸಿಕೊಂಡಿರುವುದು ಖೇದಕರ ಸಂಗತಿ ಎಂದರು.
ಡಾ. ಶಂಭು ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ, ಡಾ. ಜಿ.ಎ.ತಿಗಡಿ, ಡಾ. ಗಿರೀಶ ದೇಸೂರ ಮÁತನಾಡಿದರು.