

ಜಾಣ್ಮೆಯುತ ಆಟ ಪ್ರದರ್ಶಿಸಿದ ಮಂಡ್ಯದ ಎಂ.ಶಿವಾಂತ್ ರಾಜ್ಯ ಮಟ್ಟದ ಸದ್ವಿದ್ಯಾ ಅಂಡರ್-19 ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದರು.
ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠಶಾಲೆಯ ಶತೋತ್ತರ, ಸದ್ವಿದ್ಯಾ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಮತ್ತು ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ ರಜತ ಮಹೋತ್ಸವ ಪ್ರಯುಕ್ತ ವಿಜಯನಗರದ ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ 6.5 ಅಂಕ ಪಡೆದು ಈ ಸಾಧನೆ ಮಾಡಿದರು.
7.5 ಸಾವಿರ ರೂ. ನಗದು ಬಹುಮಾನದ ಜತೆಗೆ ಪ್ರಶಸ್ತಿ ಪಡೆದುಕೊಂಡರು. ಮೈಸೂರಿನ ಶ್ರೇಯಸ್ ಕೆ.ಪಾಟೀಲ್ ದ್ವಿತೀಯ(5 ಸಾವಿರ), ಪ್ರೀತಂ ಎಸ್.ರಾವ್ ತೃತೀಯ (4.5 ಸಾವಿರ ರೂ.) ಬಹುಮಾನ ಪಡೆದರು. ಕೆ.ಎಂ.ಪ್ರಜ್ವಲ್, ವಿಹಾನ್ ವೇಣುಗೋಪಾಲ್, ಈಶ್ವರ್ ವೀರಪ್ಪನ್ ಅಯ್ಯಪ್ಪನ್, ಅಶ್ವತ್ಥರಾಮ್, ಎಂ.ಎಚ್.ಆಕಾಶ್ ಕ್ರಮವಾಗಿ ನಂತರದ ಸ್ಥಾನ ಪಡೆದರು.
ಬಾಲಕರ ಅಂಡರ್-7 ವಿಭಾಗದಲ್ಲಿ ಕೌಸ್ತುಭ್ ತೇಜ್‌ಕುಮಾರ್(ಪ್ರಥಮ), ವಿ.ಸಿಧ್ವಿಕ್(ದ್ವಿತೀಯ), ಲಕ್ಷಿತ್ ದಯಾನಂದ್(ತೃತೀಯ), ಬಾಲಕಿಯರ ಅಂಡರ್-7 ವಿಭಾಗದಲ್ಲಿ ಬಿ.ವೈ.ತ್ರಿಷಿಕಾ ಗೌಡ(ಪ್ರ), ದಿಶಿತಾ(ದ್ವಿ), ಅದ್ವಿತಾ ಮೋಹನ್(ತೃ) ಬಹುಮಾನ ಪಡೆದರು. ಬಾಲಕರ ಅಂಡರ್-9 ವಿಭಾಗದಲ್ಲಿ ಸ್ರಗ್ವಿಧ(ಪ್ರ), ಆರ್.ತನುಷ್(ದ್ವಿ), ಕೆ.ಎಸ್.ಚಿನ್ಮಿತ್(ತೃ), ಬಾಲಕಿಯರ ಅಂಡರ್-9 ವಿಭಾಗದಲ್ಲಿ ತ್ರಿಷಿಕಾ(ಪ್ರ), ರಾಜೇಶ್ವರಿ(ದ್ವಿ), ಆರಾಧ್ಯಾ(ತೃ) ಬಹುಮಾನ ಪಡೆದರು. ಬಾಲಕರ ಅಂಡರ್-13 ವಿಭಾಗದಲ್ಲಿ ನಿವಾನ್ ರಾಘವೇಂದ್ರ(ಪ್ರ), ಅಕುಲ್ ಆನಂದ್(ದ್ವಿ), ರಿಶಿ(ತೃ), ಬಾಲಕಿಯರ ಅಂಡರ್-13 ವಿಭಾಗದಲ್ಲಿ ಜಾನವಿ(ಪ್ರ), ತನಿಷ್ಕಾ ಜೈನ್(ತೃ), ಯದ್ವಿತಿ(ತೃ) ಬಹುಮಾನ ಪಡೆದರು.
ಇದಕ್ಕೂ ಮುನ್ನ ಗ್ರ್ಯಾಂಡ್ ಮಾಸ್ಟರ್ ಎಂ.ಎಸ್.ತೇಜ್‌ಕುಮಾರ್ ಪಂದ್ಯಾವಳಿಗೆ ಚಾಲನೆ ನೀಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿಪ್ರೊ.ಎಂ.ಎಸ್.ಕೆ.ನರಹರಿಬಾಬು ಮಾತನಾಡಿ, ಕಾರ್ಯಕ್ರಮದ ಉದ್ದೇಶ ಮತ್ತು ಆಶಯಗಳನ್ನು ತಿಳಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಕ್ರೀಡೆಗಳ ಮಹತ್ವವನ್ನು ತಿಳಿಸಿಕೊಡುತ್ತಾ ವಿಶ್ವ ಚೆಸ್ ಇತಿಹಾಸವನ್ನು ಮೆಲುಕು ಹಾಕಿದರು.
ಜಂಟಿ ಕಾರ್ಯದರ್ಶಿ ಪ್ರೊ.ಹಿರಿಯಣ್ಣ, ಆಡಳಿತ ಮಂಡಳಿಯ ಸದಸ್ಯರಾದ ನಳಿನಿ ಚಂದರ್, ಪ್ರಸನ್ನ, ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೈ.ಆರ್.ರಮೇಶ್, ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಆರ್. ಕವಿತಾ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್ ಇತರರಿದ್ದರು.
ಸ್ಪರ್ಧೆಯಲ್ಲಿ 416ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.