

ಹಲಗೂರು: ಭೂಮಿ ಮೇಲೆ ವಾಸಿಸುವ ಪ್ರತಿ ಜೀವರಾಶಿಗೂ ಆಮ್ಲಜನಕ ಅವಶ್ಯವಾಗಿದ್ದು, ಹೆಚ್ಚು ಗಿಡಗಳನ್ನು ನೆಡುವ ಕೆಲಸವಾಗಬೇಕು ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೈ ಬಾಲಾಜಿ ಶಾಸ್ತ್ರಿ ತಿಳಿಸಿದರು.
ಸಮೀಪದ ಗುಂಡಾಪುರ ಗೇಟ್ ಬಳಿ ಹಲಗೂರಿನ ಅಲಯನ್ಸ್ ಕ್ಲಬ್ ವತಿಯಿಂದ ಸೋಮವಾರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದರಲ್ಲಿ ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಭೂಮಿ ಮೇಲೆ ವಾಸಿಸುವ ಪ್ರತಿಯೊಬ್ಬರಿಗೂ ಉತ್ತಮ ಆಮ್ಲಜನಕ ದೊರಕಬೇಕಾದರೆ ಗಿಡ ನೆಡುವುದು ಅತ್ಯವಶ್ಯಕ ಎಂದು ತಿಳಿಸಿದರು.
ಅಲಯನ್ಸ್ ಮೈತ್ರಿಕೂಟದ ಅಧ್ಯಕ್ಷ ಸುರೇಂದ್ರ ಮಾತನಾಡಿದರು. ಇದೇ ವೇಳೆ ಸಂಸ್ಥೆ ಅಧ್ಯಕ್ಷ ಸುರೇಂದ್ರ ಅವರಿಗೆ ಇಂಟರ್ ನಾಷನಲ್ ಪಿನ್ ಹಾಕುವ ಮುಖಾಂತರ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಎಚ್.ಮಾದೇಗೌಡ, ಚಂದ್ರಶೇಖರ್, ಎನ್. ಶಿವಣ್ಣ, ವಿ.ಎಸ್.ನಾಗರಾಜು ಇತರರಿದ್ದರು.