ಸೆಸ್ಕ್ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮ

ಸಿಬ್ಬಂದಿಗೆ ಸಿಹಿ ಹಂಚಿಕೆ
ಹಲಗೂರಿನ ಸೆಸ್ಕ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಗುರು, ಸೂರ್ಯಕುಮಾರ್, ಶಂಕರಪ್ಪ, ರಾಘವೇಂದ್ರ, ಕುಮಾರ್ ಇದ್ದರು.
ಹಲಗೂರಿನ ಸೆಸ್ಕ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಗುರು, ಸೂರ್ಯಕುಮಾರ್, ಶಂಕರಪ್ಪ, ರಾಘವೇಂದ್ರ, ಕುಮಾರ್ ಇದ್ದರು.
Published on: 

ಹಲಗೂರು: ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಸೆಸ್ಕ್ ಕಚೇರಿ ಆವರಣದಲ್ಲಿ ಹಲಗೂರು ಮತ್ತು ಬ್ಯಾಡರಹಳ್ಳಿ ಸೆಸ್ಕ್ ಶಾಖೆಗಳ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆಯ ಅಂಗವಾಗಿ ಇಂಜಿನಿಯರ್‌ ಶಿವಲಿಂಗು ಅವರು ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಿಬ್ಬಂದಿಗೆ ಸಿಹಿ ಹಂಚಿದರು.

ಬಳಿಕ ಅವರು ಮಾತನಾಡಿ, ವಾಲ್ಮೀಕಿಯು ಬೇಡರ ಕುಟುಂಬದಲ್ಲಿ ಹುಟ್ಟಿ, ಕಾಡಿನಲ್ಲಿ ಜೀವನ ನಡೆಸುತ್ತಿದ್ದರು. ನಾರದ ಮುನಿಗಳ ಭೇಟಿಯಿಂದ ಮನಸ್ಸು ಪರಿವರ್ತನೆ ಹೊಂದಿ ತಪಸ್ಸುಗೈದು ಹಿಂದುಗಳ ಮಹಾ ಗ್ರಂಥ ರಾಮಾಯಣದ ರಚನೆಕಾರರಾದರು. ವಾಲ್ಮೀಕಿ ಜಯಂತಿಯನ್ನು ಆಶ್ವಯುಜ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಅವರು ಬರೆದಿರುವ ಪುಸ್ತಕಗಳನ್ನು ಓದಿ ಅವರ ಆದರ್ಶ ತತ್ವಗಳನ್ನು ನಾವುಗಳು ಮೈಗೂಡಿಸಿಕೊಂಡು ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸೆಸ್ಕ್ ಬ್ಯಾಡರಹಳ್ಳಿ ಶಾಖೆಯ ಇಂಜಿನಿಯರ್ ಗುರು, ಸೂರ್ಯಕುಮಾರ್, ಹಿರಿಯ ಪವರ್‌ಮೆನ್‌ಗಳಾದ ಶಂಕರಪ್ಪ, ರಾಘವೇಂದ್ರ, ಕುಮಾರ್, ಬಿ.ಪುಟ್ಟಸ್ವಾಮಿ ಹಾಗೂ ಗ್ಯಾಂಗ್‌ಮೆನ್‌ಗಳು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net