

ಕೆ.ಎಂ.ದೊಡ್ಡಿ: ಸರ್ಕಾರಿ ಶಾಲೆಯ ಅಭಿವೃದ್ಧಿ ಸೇರಿದಂತೆ ಉದ್ಯೋಗಾಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಸುವಿಧಾ ಫೌಂಡೇಷನ್ ಸಂಕಲ್ಪ ಮಾಡಿದೆ ಎಂದು ಫೌಂಡೇಷನ್ ಮುಖ್ಯಸ್ಥ ಸುಧೀಂದ್ರ ತಿಳಿಸಿದರು.
ಸಮೀಪದ ಅಣ್ಣೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರ ಸುವಿಧಾ ಫೌಂಡೇಷನ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಡಿ ಕಾರ್ಡ್, ಟೈ, ಬೆಲ್ಟ್ ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಯ ಮಕ್ಕಳ ಯಶಸ್ಸಿಗೆ ಸಂಸ್ಥೆ ಸದಾ ಸಿದ್ಧವಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಹೊಸ ಕಾರ್ಯಕ್ರಮ ಆಯೋಜಿಸುವ ಜತೆಗೆ ಉದ್ಯೋಗಾಕಾಂಕ್ಷಿಗಳ ಏಳಿಗೆಗೆ ಸಂಸ್ಥೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಕಷ್ಟಪಟ್ಟು ಬೆಳೆಸಿದ ತಂದೆಯ ಸವಿನೆನಪಿನಲ್ಲಿ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಏಳಿಗೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸುವುದರ ಜತೆಗೆ ರೈತ ಮಕ್ಕಳು ಉಜ್ವಲ ಭವಿಷ್ಯ ರೂಪಿಸಲು ನಮ್ಮ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಘವೇಂದ್ರ, ಯುವ ಮುಖಂಡ ಯೋಗೇಂದ್ರ, ಪ್ರಭಾರ ಪ್ರಾಂಶುಪಾಲ ವೆಂಕಟೇಶ್, ಸುವಿಧಾ ಫೌಂಡೇಷನ್ನ ವಿನುತಾ, ಯುವ ಮುಖಂಡ ನವೀಂದ್ರ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಕುಳ್ಳೇಗೌಡ, ಜಯಸ್ವಾಮಿ, ಮುಖ್ಯಶಿಕ್ಷಕರಾದ ಬಸವರಾಜು ಮತ್ತು ಸಿದ್ದೇಗೌಡ, ಎಸ್ಡಿಎಂಸಿ ಉಪಾಧ್ಯಕ್ಷೆ ಸುನಿತಾ, ಶಿವಲಿಂಗಯ್ಯ, ಉಪನ್ಯಾಸಕ ಪ್ರವೀಣ್, ಶಿಕ್ಷಕ ರಾಜು, ಶಿಕ್ಷಕಿ ಸವಿತಾ, ವಿಜಯ್, ಮನು, ನಂದೀಶ್ ಇತರರು ಇದ್ದರು.