ಶಾಲಾ ದಿನಗಳನ್ನು ನೆನೆದು ಸಂಭ್ರಮಿಸಿದ ಸಹಪಾಠಿಗಳು

ಬೋಳಮಾರನಹಳ್ಳಿಯಲ್ಲಿ ಗುರುಗಳಿಗೆ ಶಿಷ್ಯರಿಂದ ಸನ್ಮಾನ
ಕಿಕ್ಕೇರಿ ಹೋಬಳಿಯ ಆನೆಗೊಳ ಆದಿಚುಂಚನಗಿರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸಿದರು. ಸಿ.ಡಿ.ಜಯರಾಂ, ಅರುಣ್‌ಕುಮಾರ್, ಹರೀಶ್ ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಆನೆಗೊಳ ಆದಿಚುಂಚನಗಿರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸಿದರು. ಸಿ.ಡಿ.ಜಯರಾಂ, ಅರುಣ್‌ಕುಮಾರ್, ಹರೀಶ್ ಮತ್ತಿತರರಿದ್ದರು.
Published on: 

ಕಿಕ್ಕೇರಿ: ಗುರುಗಳ ಮರೆತರೆ ಬದುಕು ನಶ್ವರ ಎಂದು ಹಳೇ ವಿದ್ಯಾರ್ಥಿ ಬಳಗದ ಬೋಳಮಾರನಹಳ್ಳಿ ಅರುಣ್‌ಕುಮಾರ್ ತಿಳಿಸಿದರು.

ಹೋಬಳಿಯ ಆನೆಗೊಳ ಆದಿಚುಂಚನಗಿರಿ ಪ್ರೌಢಶಾಲೆ 1998ರಿಂದ 2010ನೇ ಸಾಲಿನ ಹಳೇ ವಿದ್ಯಾರ್ಥಿ ಬಳಗದವರು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮ್ಮ ಇಂದಿನ ಉತ್ತಮ ಶಿಸ್ತಿಗೆ ಗುರು ಹಾಕಿಕೊಟ್ಟ ವಿದ್ಯೆ ಮೆಟ್ಟಿಲಾಗಿದೆ. ತಮ್ಮ ನೇತೃತ್ವದಲ್ಲಿ ಗುರುನಮನ ಪ್ರತಿ ಬ್ಯಾಚ್‌ನವರು ನಡೆಸುತ್ತಿದ್ದು ಗುರುಗಳ ಮೇಲೆ ಇಟ್ಟಿರುವ ಶಿಷ್ಯರ ಪ್ರೀತಿ ಇದಾಗಿದೆ. ನಮ್ಮ ಗುರಿಯ ಹಿಂದೆ ಗುರು ಇದ್ದರು. ಶಿಕ್ಷೆ ಜತೆ ಶಿಕ್ಷಣ ಇತ್ತು. ಗುರುಗಳು ಕೊಡುತ್ತಿದ್ದ ಬೆತ್ತದ ರುಚಿ ಉನ್ನತ ಓದು, ಹುದ್ದೆಗೆ ಸಾಕ್ಷಿಯಾಗಿದೆ ಎಂದರು.

ನಿವೃತ್ತ ಶಿಕ್ಷಕ ಸಿ.ಡಿ.ಜಯರಾಂ ಮಾತನಾಡಿ, ತನ್ನ ಶಿಷ್ಯರು ಉನ್ನತ ಹುದ್ದೆಯಲ್ಲಿದ್ದು ತಮ್ಮನ್ನು ನೆನೆದು ನೀಡುತ್ತಿರುವ ಗೌರವ ಮರೆಯಲಾರೆ. ವಿದ್ಯೆ ಸಾಧಕರ ಸ್ವತ್ತು ಎನ್ನುವುದಕ್ಕೆ ತನ್ನ ಶಿಷ್ಯರೇ ಸಾಕ್ಷಿ. ಹಿಂದಿನ ಪೀಳಿಗೆ ಮೊಬೈಲ್, ಸಾಮಾಜಿಕ ಜಾಲತಾಣದಿಂದ ದಾರಿ ತಪ್ಪುವಂತಾಗಿದೆ. ಉತ್ತಮ ಪುಸ್ತಕ ಜ್ಞಾನದ ಕೋಶವಾಗಿದೆ ಎಂಬುದನ್ನು ಪಾಲಕರು ಮಕ್ಕಳಿಗೆ ತಿಳಿಸಬೇಕಿದೆ ಎಂದು ನುಡಿದರು.

ಗುರುಗಳಾದ ಸಿ.ಡಿ.ಜಯರಾಂ, ಮಂಜುನಾಥ್, ಕೆ.ಎಲ್.ಶಿವಲಿಂಗೇಗೌಡ, ನವೀನ್, ಎ.ಸಿ.ಮಂಜುನಾಥ್, ಎಂ. ರವೀಂದ್ರಕುಮಾರ್, ಮಹಾಲಿಂಗೇಗೌಡ, ನಾಗರಾಜು, ಪ್ರೇಮಮ್ಮ, ಭಾರತಿ ಗೌರವಿಸಲಾಯಿತು.

ಹಳೇ ವಿದ್ಯಾರ್ಥಿ ಸಂಘದ ಹರೀಶ್, ಶ್ರೀಧರ, ರವಿಚಂದ್ರ, ಸುರೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net