ರಾಷ್ಟ್ರೀಯ ಪಂದ್ಯಕ್ಕೆ ಆಯ್ಕೆಯಾದವರಿಗೆ ಅಭಿನಂದನೆ

ಆಯ್ಕೆಯಾದವರಿಗೆ ಅಭಿನಂದನೆ
ರಾಷ್ಟ್ರೀಯ ಸಬ್ ಜೂನಿಯರ್ ಥ್ರೋ ಬಾಲ್ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಲೋಕೇಶ್, ಎನ್.ಕುಮಾರ್, ನಾರಾಯಣ, ಕುಮಾರ್, ಬಾಲಸುಬ್ರಮಣ್ಯ, ಶ್ರೀಧರ್ ಇದ್ದರು.
ರಾಷ್ಟ್ರೀಯ ಸಬ್ ಜೂನಿಯರ್ ಥ್ರೋ ಬಾಲ್ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಲೋಕೇಶ್, ಎನ್.ಕುಮಾರ್, ನಾರಾಯಣ, ಕುಮಾರ್, ಬಾಲಸುಬ್ರಮಣ್ಯ, ಶ್ರೀಧರ್ ಇದ್ದರು.
Published on: 

ಮದ್ದೂರು: ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ನಡೆಯುತ್ತಿರುವ 34ನೇ ರಾಷ್ಟ್ರೀಯ ಸಬ್ ಜೂನಿಯರ್ ಥ್ರೋ ಬಾಲ್ ಪಂದ್ಯಾವಳಿಗೆ ರಾಜ್ಯದ ಬಾಲಕ ಬಾಲಕಿಯರ ತಂಡಕ್ಕೆ ತಾಲೂಕಿನ ಕೆ.ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಬಿ.ಎಸ್.ಆಕಾಶ್, ಶ್ರೀಜಿತ್, ಭೂಮಿಕಾ, ಎನ್.ಎಸ್.ಕೀರ್ತನಾ ಅವರು ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಕ್ರೀಡಾಪಟುಗಳನ್ನು ಬಿಇಒ ಎಸ್.ಬಿ.ಧನಂಜಯ್, ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್, ಮುಖ್ಯ ಶಿಕ್ಷಕ ಎನ್.ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ, ಕುಮಾರ, ಸದಸ್ಯ ಶ್ರೀಧರ್, ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಲಿಂಗಯ್ಯ, ಬಾಲಸುಬ್ರಮಣ್ಯ ಸಹ ಶಿಕ್ಷಕ ವೃಂದದವರು, ಪಾಲಕರು ಗ್ರಾಮಸ್ಥರು ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net