

ಪಾಂಡವಪುರ:
ತಾಲೂಕಿನ ಎಲೆಕೆರೆ ಹ್ಯಾಂಡ್‌ಪೋಸ್ಟ್‌ನ ಪಿಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ, ವಿಭಾಗೀಯ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.
ಆಯ್ಕೆಯಾದ ವಿದ್ಯಾರ್ಥಿಗಳು: ಸುಮಂತ್, ಸ್ಕೇಟಿಂಗ್ (ಪ್ರಥಮ), ಚಿರಾಗ್‌ರಾಜ್, ಎಚ್.ಜಿ.ಮದನ್, ಡಿ.ಕೆ.ಕರ್ಣ ಟೇಬಲ್ ಟೆನ್ನಿಸ್ (ಪ್ರಥಮ) ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ದಸರಾ ಸಿಎಂ ಕಪ್‌ನಲ್ಲಿ ಲೇಪನ, ವಂಶಿತ್, ಚೇತನ್, ನಿಶಾಂತ್, ಅಮೃತ್ ಹಾಗೂ ಗಗನ್ ಧೀರಜ್ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂತೆಯೇ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರೌಢಶಾಲಾ ವಿಭಾಗದದಿಂದ ಕೆ.ವಿ.ತೇಜಸ್, ಚಿರಂಜೀವಿ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಮನೋಹರ, ಸುಮಂತ್ ಪ್ರಥಮ ಸ್ಥಾನ ಪಡೆದು ವಿಭಾಗೀಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿ.ಲೇಖನಾ ಅವರು ವೈಯಕ್ತಿಕ ಚಾಂಪಿಯನ್‌ಷಿಪ್‌ನಲ್ಲಿ 100, 200 ಮೀ. ಓಟ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಸಿಂಧುಶ್ರೀ, ಎಚ್.ಜಿ.ಮದನ್‌ಗೌಡ, ಲಿಖಿತ್, ತನುಶ್ರೀ, ಮನ್ವಿತ್, ಮನಸ್ವಿ, ಸಮರ್ಥ್, ಆದರ್ಶ, ಭುವನ ಸೇರಿದಂತೆ ಒಟ್ಟು 38 ವಿದ್ಯಾರ್ಥಿಗಳು ಕ್ರಿಕೆಟ್, ಕರಾಟೆ, ಕುಸ್ತಿ, ಚೆಸ್ ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವೇಳೆ ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆಗೈದು ಶಾಲೆಗೆ ಕೀರ್ತಿ ತಂದುಕೊಟ್ಟ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಮಂಗಳಾ ನವೀನ್, ಜಿಲ್ಲಾ, ವಿಭಾಗೀಯ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಅ.3ರಂದು ಚನ್ನಪಟ್ಟಣದಲ್ಲಿ ರಾಜ್ಯಮಟ್ಟದ ಟೇಬಲ್ ಟೆನಿಸ್ ನಡೆಯಲಿದೆ. ರಾಜ್ಯಮಟ್ಟದ ಸ್ಕೇಟಿಂಗ್ ಕ್ರೀಡಾಕೂಟದ ದಿನಾಂಕ ನಿಗದಿಯಾಗಿಲ್ಲ. ಜತೆಗೆ ಅ.6, 7, 8ರಂದು ಮಂಗಳೂರಿನಲ್ಲಿ ವಿಭಾಗೀಯಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಈ ಎಲ್ಲ ಕ್ರೀಡೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಗೆಲುವು ಸಾಧಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
ಮುಖ್ಯಶಿಕ್ಷಕ ಮಹೇಶ್ವರಪ್ಪ, ಚಾರ್ಲೆಟ್ ಮೆಟಿಲ್ಡ, ಎಸ್.ಕೆ.ಚಲುವರಾಜು, ಚಂದ್ರಶೇಖರ್, ಶಾಹಿನ್ ತಾಜ್, ಅಶ್ವಿನಿ, ರಾಧಕೃಷ್ಣ, ಮಂಜುನಾಥ್, ದೀಪಾ, ಪದ್ಮಾ, ಶಿರಿನ್, ದೈಹಿಕ ಶಿಕ್ಷಣ ಶಿಕ್ಷಕರಾದ ನೀತಾದೇಶಿ, ರವಿಕುಮಾರ್, ಸಿಬ್ಬಂದಿ ರೇವಣ್ಣ, ತೇಜಸ್ವಿ, ದಿವಾಕರ್ ಸೇರಿದಂತೆ ಇತರರಿದ್ದರು.