ಯೋಗ ಗುರು ಅಲ್ಲಮಪ್ರಭುಗೆ ಯೋಗರತ್ನ ಪ್ರಶಸ್ತಿ ಗರಿ

ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಯೋಗರತ್ನ ಯೋಗ ಗುರು ಎಸ್.ಎಂ. ಅಲ್ಲಮಪ್ರಭು ಅವರಿಗೆ ಯೋಗರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನಿಲ್ ಪವಾರ್, ಡಾ. ಯೋಗಿ ದೇವರಾಜ್ ಇತರರಿದ್ದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಯೋಗರತ್ನ ಯೋಗ ಗುರು ಎಸ್.ಎಂ. ಅಲ್ಲಮಪ್ರಭು ಅವರಿಗೆ ಯೋಗರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನಿಲ್ ಪವಾರ್, ಡಾ. ಯೋಗಿ ದೇವರಾಜ್ ಇತರರಿದ್ದರು.
Published on: 

ಕೆ.ಆರ್.ಪೇಟೆ: ತಾಲೂಕಿನ ಖ್ಯಾತ ಯೋಗ ಗುರು ಎಸ್.ಎಂ.ಅಲ್ಲಮಪ್ರಭು ಅವರಿಗೆ ರಾಷ್ಟ್ರೀಯ ಯೋಗರತ್ನ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಪುಟ್ಟಣ್ಣ ಚಟ್ಟಿ ಟೌನ್‌ಹಾಲ್‌ನಲ್ಲಿ ಅ.25ರಂದು ರೋಟರಿ ಗ್ಲೋಬಲ್ ಯೋಗ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯದೊಂದಿಗೆ 28 ವರ್ಷಗಳಿಂದ ಯೋಗ ಶಿಕ್ಷಣದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಸೇಡಂ, ಆಯುಷ್ ಇಲಾಖೆ ಆಯುಕ್ತ ಅನಿಲ್ ಪವಾರ್, ಡಾ. ಯೋಗಿ ದೇವರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net