

ಮಳವಳ್ಳಿ : ಪಟ್ಟಣದಲ್ಲಿ ಬುಧವಾರ ರಾತ್ರಿ ನಂದಿನಿ ಉತ್ಪನ್ನ ಮಾರಾಟದ ಮೂರು ಕೇಂದ್ರಗಳಲ್ಲಿ ಸರಣಿ ಕಳ್ಳತನ ನಡೆದ್ದು, ಸುಮಾರು ಐವತ್ತು ಸಾವಿರ ರೂ. ಗೂ ಅಧಿಕ ಹಣ ದೋಚಲಾಗಿದೆ.
ಮೈಸೂರು ಮುಖ್ಯರಸ್ತೆಯ ತಾಪಂ ಬಳಿ ಇರುವ ವಡ್ಡರಹಳ್ಳಿ ಮಹೇಶ್ ಅವರ ನಂದಿನಿ ಹಾಲಿನ ಕೇಂದ್ರ, ದಯಾನಂದ ನರ್ಸಿಂಗ್ ಹೋಂ ಪಕ್ಕದಲ್ಲಿರುವ ಚೆನ್ನೇಗೌಡನದೊಡ್ಡಿ ಮಹೇಶ್ ಮಾಲೀಕತ್ವದ ಕೇಂದ್ರ ಹಾಗೂ ಎನ್ಇಎಸ್ ಬಡಾವಣೆಯ ಬಾಣಗಹಳ್ಳಿ ಗಂಗಾಧರ ಅವರ ಹಾಲಿನ ಕೇಂದ್ರದಲ್ಲಿ ಕಳ್ಳತನವಾಗಿದೆ.
ಬೈಕ್ನಲ್ಲಿ ಬಂದಿದ್ದ ಇಬ್ಬರು ಖದೀಮರು ಕಬ್ಬಿಣದ ರಾಡ್ ಬಳಸಿ ರೋಲಿಂಗ್ ಶಟರ್ ಮೀಟಿ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ಹಾಗೂ ಇತರ ವಸ್ತುಗಳನ್ನು ದೋಚಿದ್ದಾರೆ.
ತಾಲೂಕು ಪಂಚಾಯಿತಿ ಬಳಿಯ ಕೇಂದ್ರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳತನದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಬೈಕ್ನಲ್ಲಿ ಬಂದಿದ್ದ ಕಳ್ಳರು ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡಿದ್ದು, ಗುರುತು ಸಿಗದಂತೆ ಎಚ್ಚರ ವಹಿಸಿ ಕೃತ್ಯ ಎಸಗಿದ್ದಾರೆ. ಮೂರು ಹಾಲಿನ ಕೇಂದ್ರಗಳ ಕಳ್ಳತನದ ಬಗ್ಗೆ ಪ್ರಕರಣ ದಾಖಲಾಗಿದೆ.