ಮಕ್ಕಳಲ್ಲಿ ಸದ್ಗುಣ, ಸದ್ಭಾವನೆ ಬೆಳೆಸಿ

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಶಿವಕುಮಾರ್
teacher bairappa felicitation
ಸೇವೆಯಿಂದ ನಿವೃತ್ತಿ ಹೊಂದಿದ ಎನ್.ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಭೈರಪ್ಪ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಕೆ.ಟಿ.ಶಿವಕುಮಾರ್, ಸತೀಶ್, ಹೇಮಾವತಿ, ವೆಂಕಟೇಶ್ ಇದ್ದರು.#teacher#bairappa#felicitation
Published on: 

ಮದ್ದೂರು: ಸೇವೆಯಿಂದ ನಿವೃತ್ತಿ ಹೊಂದಿದ ತಾಲೂಕಿನ ಎನ್.ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಭೈರಪ್ಪ ಅವರಿಗೆ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಭೈರಪ್ಪ ಅವರು ಸರಳ, ಸಜ್ಜನಿಕೆಯ ವ್ಯಕ್ತಿ. ಸುಮಾರು 32 ವರ್ಷ ತಾಲೂಕಿನ ಅಜ್ಜಹಳ್ಳಿ, ಬೆಳತೂರು, ಕೆರಮೇಗಲದೋಡ್ಡಿ, ಬೆಸಗರಹಳ್ಳಿ ಕೆಪಿಎಸ್ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತಿ ಹೊಂದುತ್ತಿದ್ದಾರೆ. ಮಕ್ಕಳಲ್ಲಿ ಸದ್ಗುಣ, ಸದ್ಭಾವನೆ, ಶಿಸ್ತು, ಸಂಯಮ ಬೆಳೆಸಿರುವುದು ಮೆಚ್ಚುಗೆಯ ವಿಷಯ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಭೈರಪ್ಪ, 32 ವರ್ಷ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕಿ ಹೇಮಾವತಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ.ವೆಂಕಟೇಶ್, ಮುಖಂಡರಾದ ಕೆ.ಟಿ.ಸತ್ಯಪ್ಪ, ಕೆ.ಎಂ.ಸತೀಶ್, ಕೆ.ಸಿ.ಸುನೀಲ್, ಕೆ.ಸಿ.ಸಾಯಿ ಶಂಕರ್, ಎಸ್‌ಡಿಎಂಸಿ ಅಧ್ಯಕ್ಷ ವಿಜೇಂದ್ರ, ರಜಿನಿ ರಾಜ್, ಮಂಜು, ವೈರಮುಡಿ, ಸಿಆರ್‌ಪಿ ಜ್ಞಾನೇಂದ್ರ, ವನಿತಾ ಇತರರು ಇದ್ದರು.