ಭತ್ತದ ಗದ್ದೆಗೆ ಎಳನೀರು ವಾಹನ ಪಲ್ಟಿ

ಚಾಲಕ ಸೇರಿ ಮೂವರು ಪ್ರಾಣಾಪಾಯದಿಂದ ಪಾರು
goods van accident
ಚಿತ್ರಶೀರ್ಷಿಕೆ: ಹೊಸಹೊಳಲು ಗ್ರಾಮದ ಬಳಿ ಭತ್ತದ ಗದ್ದೆಗೆ ಪಲ್ಟಿಯಾಗಿರುವ ಎಳನೀರು ಸಾಗಿಸುವ ವಾಹನ.
Published on: 

ಕೆ.ಆರ್.ಪೇಟೆ: ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿದ ಎಳನೀರು ಸಾಗಿಸುತ್ತಿದ್ದ ವಾಹನ ರಸ್ತೆ ಬದಿಯ ಭತ್ತದ ಗದ್ದೆಗೆ ಪಲ್ಟಿಯಾಗಿದ್ದು ಚಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೂಕನಕೆರೆ ಮುಖ್ಯರಸ್ತೆಯ ಚೌಡೇನಹಳ್ಳಿ ಮತ್ತು ಹೊಸಹೊಳಲು ನಡುವಿನ ಮಾರ್ಗದಲ್ಲಿ ಘಟನೆ ಸಂಭವಿಸಿದೆ. ಎಳನೀರು ತುಂಬಿಕೊಂಡು ಸಾಗುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೊಸಹೊಳಲು ಗ್ರಾಮದ ಬಳಿ ರಸ್ತೆ ಬದಿಯ ಗದ್ದೆಗೆ ಉರುಳಿದೆ. ಪರಿಣಾಮ ವಾಹನದಲ್ಲಿದ್ದ ಎಳನೀರು ರಸ್ತೆಯುದ್ದಕ್ಕೂ ಹಾಗೂ ಗದ್ದೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಅಪಘಾತದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಾಹನದಲ್ಲಿದ್ದ ಚಾಲಕ ಹಾಗೂ ಇಬ್ಬರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆಳೆದು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.