

ಮದ್ದೂರು: ನಗರದ ಎಚ್‌ಕೆವಿ ಪ.ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ.ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆ ಸ್ಪರ್ಧೆಯಲ್ಲಿ ಸೋಮಹಹಳ್ಳಿಯ ಎಸ್‌ಸಿಎಂಎಂ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬೆಸಗರಹಳ್ಳಿ ಮಾನಸ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ ಬಹುಮಾನ ಪಡೆದು ಗಮನ ಸೆಳೆದಿದ್ದಾರೆ.
ತಾಲೂಕು ಮಟ್ಟದ ಸಾಂಸ್ಕೃತಿಕ ಚಟುವಟಿಕೆ ಸ್ವರ್ಧೆಯಲ್ಲಿ ವಿಂಧ್ಯಾ ಎಸ್.ಪ್ರಕಾಶ್ ಆಂಗ್ಲ ಮಾಧ್ಯಮ ಚರ್ಚಾ ಸ್ಪರ್ಧೆಯಲ್ಲಿ (ಪ್ರ), ನೀಲಾಫರ್ ಚಿತ್ರಕಲೆ ಸ್ಪರ್ಧೆಯಲ್ಲಿ (ದ್ವಿ), ಎಸ್.ನಿಶ್ಚಲ್ ಮತ್ತು ಎಂ.ಲೇಖನಾ ರಸಪ್ರಶ್ನೆಯಲ್ಲಿ (ದ್ವಿ), ಕೆ.ನಮೀತಾ ಜಾನಪದ ನೃತ್ಯದಲ್ಲಿ (ತೃ) ಬಹುಮಾನ ಪಡೆದುಕೊಂಡಿದ್ದಾರೆ.
ತಾಲೂಕು ಮಟ್ಟದ ಕ್ರೀಡಾಕೂಟ: ಬಾಲಕರ ವಿಭಾಗ ಕಬಡ್ಡಿ (ಪ್ರ), ತ್ರಿವಿದ ಜಿಗಿತ (ಪ್ರ), ಉದ್ದ ಜಿಗಿತ (ಪ್ರ), 4*100 ರ ರಿಲೆ (ದ್ವಿ), ಜಾವಲಿನ್ (ತೃ), ಡಿಸ್ಕಸ್ (ದ್ವಿ) ಮತ್ತು (ತೃ), 800 ಮೀಟರ್ ಓಟ (ತೃ) ಬಹುಮಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗ: ಕಬಡ್ಡಿ (ದ್ವಿ), 3000 ಮೀ ಓಟ (ಪ್ರ) 200 ಮೀಟರ್ ಓಟದ (ಪ್ರ), 400 ಮೀ. ಓಟ(ಪ್ರ), 4* 100 ರಿಲೆ (ಪ್ರ), ಎತ್ತರ ಜಿಗಿತ (ತೃ), ತ್ರಿವಿದ ಜಿಗಿತ (ದ್ವಿ)ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ತರಬೇತಿ ನೀಡಿದ ಎಲ್ಲ ಶಿಕ್ಷಕರಿಗೂ ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷವಿ.ಕೆ.ಜಗದೀಶ್, ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.