ಬಿಡದಿಯ ಅಶ್ವಿನಿ ಅಂಬರೀಷ್‌ಗೆ ಸೇರಿದ ಹಸುಗೆ ಪ್ರಶಸ್ತಿ

ಬಿಡದಿಯ ಅಶ್ವಿನಿ ಅಂಬರೀಷ್‌ಗೆ ಸೇರಿದ ಹಸುಗೆ ಪ್ರಶಸ್ತಿ
ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದದವರಿಗೆ ಬಹುಮಾನ ವಿತರಿಸಲಾಯಿತು. ಎ.ಎಲ್.ಕೆಂಪೂಗೌಡ, ವೈ.ಪಿ.ಮಂಜುನಾಥ್, ಕೆ.ಟಿ.ಗೋವಿಂದೇಗೌಡ, ಕೆ.ಕೆ.ಗೌಡೇಗೌಡ, ಚಿಕ್ಕಾಡೆ ಹರೀಶ್, ಕೆ.ಎನ್.ವಿಜಯಕುಮಾರ್ ಇತರರಿದ್ದರು.
ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದದವರಿಗೆ ಬಹುಮಾನ ವಿತರಿಸಲಾಯಿತು. ಎ.ಎಲ್.ಕೆಂಪೂಗೌಡ, ವೈ.ಪಿ.ಮಂಜುನಾಥ್, ಕೆ.ಟಿ.ಗೋವಿಂದೇಗೌಡ, ಕೆ.ಕೆ.ಗೌಡೇಗೌಡ, ಚಿಕ್ಕಾಡೆ ಹರೀಶ್, ಕೆ.ಎನ್.ವಿಜಯಕುಮಾರ್ ಇತರರಿದ್ದರು.
Published on: 

ಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸರ್. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜನ್ಮದಿನದ ಪ್ರಯುಕ್ತ ಎರಡು ದಿನ ಆಯೋಜಿಸಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬಿಡದಿಯ ಅಶ್ವಿನಿ ಅಂಬರೀಷ್ ಅವರಿಗೆ ಸೇರಿದ ಹಸು 45 ಲೀ. 300 ಗ್ರಾಂ ಹಾಲು ಕರೆಯುವ ಮೂಲಕ ಪ್ರಥಮ ಸ್ಥಾನ ಪಡೆದು 75,549 ರೂ. ನಗದು, ಟ್ರೋಫಿ ಹಾಗೂ ಪಶು ಆಹಾರ ಬಹುಮಾನವನ್ನು ಪಡೆಯಿತು.

ಉಳಿದಂತೆ ಶ್ರೀರಂಗಪಟ್ಟಣ ತಾಲೂಕು ಚಿನ್ನೇನಹಳ್ಳಿ ಗ್ರಾಮದ ಕಿರಣ್ ಗೂಳಿ ಅವರ ಹಸು 41 ಲೀ. 970 ಗ್ರಾಂ ಹಾಲು ಕರೆಯುವ ಮೂಲಕ ದ್ವೀತಿಯ ಸ್ಥಾನ 55,549 ರೂ. ನಗದು, ಟ್ರೋಫಿ ಹಾಗೂ ಪಶುಆಹಾರ ಪಡೆದರು.

ಚನ್ನಪಟ್ಟಣದ ಅಭಿಷೇಕ್ ಅವರಿಗೆ ಸೇರಿದ ಹಸು 36 ಲೀ. 750 ಗ್ರಾಂ ಹಾಲು ಕರೆದು ತೃತೀಯ ಬಹುಮಾನ 25,549 ರೂ. ನಗದು, ಟ್ರೋಫಿ ಮತ್ತು ಪಶು ಆಹಾರ ಪಡೆದರು. ಮೈಸೂರಿನ ಗಣೇಶ್ ಎಜಿಎಂ ಅವರಿಗೆ ಸೇರಿದ ಹಸು 35 ಲೀ. 990 ಗ್ರಾಂ ಹಾಲು ಕರೆದು ನಾಲ್ಕನೇ ಬಹುಮಾನ 15,549 ರೂ. ನಗದು, ಟ್ರೋಫಿ ಮತ್ತು ಪಶು ಆಹಾರ ಬಹುಮಾನವನ್ನಾಗಿ ಪಡೆಯಿತು. ಉಳಿದಂತೆ ಸ್ಫರ್ಧೆಯಲ್ಲಿ ಭಾಗವಹಿಸಿದ್ದ 13 ಹಸುಗಳ ಮಾಲೀಕರಿಗೆ ಪಶು ಆಹಾರ ಮತ್ತು ಸಮಾಧಾನಕರ ಬಹುಮಾನ ನೀಡಲಾಯಿತು.

ಕ್ಯಾತನಹಳ್ಳಿ ಗ್ರಾಮಸ್ಥರು, ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ, ಮಂಡ್ಯ, ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಪುಟ್ಟಣ್ಣಯ್ಯ ಫೌಂಡೇಷನ್ ಸಹಯೋಗದಲ್ಲಿ ಕಾಮಧೇನು ಕ್ಷೀರ ವೈಭವ, ಆಧುನಿಕ ಹೈನುಗಾರಿಕೆ ನಮ್ಮ ಹೆಮ್ಮೆ, ಗೋ ರಕ್ಷಣೆ ನಮ್ಮ ಹೊಣೆ ಎಂಬ ಧ್ಯೇಯವಾಕ್ಯದೊಂದಿಗೆ ದಿ. ಕೆ.ಎಸ್.ಪುಟ್ಟಣ್ಣಯ್ಯ ಕ್ಷೀರಧಾರ ಪ್ರಥಮ ವರ್ಷದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರಾದ ಗಂಜಾಂನ ನಿಶಾಂತ್ ಶಿವರಾಮು, ಅಜೇಯ್ ವೆಟ್ ಫಾರಂ, ಪಾಂಡವಪುರ ಕಟ್ಟೇರಿ ಶರತ್ ಜವರೇಗೌಡ, ಮೈಸೂರಿನ ಮೇಟಗಳ್ಳಿಯ ಭೈರವೇಶ್ವರ ಡೇರಿ, ಬೆಂಗಳೂರಿನ ಕನಕನ ಪಾಳ್ಯದ ಪಟಾಲಮ್ಮ ಪಶುಪಾಲನೆ, ಪಾಂಡವಪುರ ಎಲೆಕೆರೆಯ ರವಿ ಚಂದ್ರಶೇಖರ್, ಮಂಡ್ಯ ಕಾಲಭೈರವೇಶ್ವರ, ಗುಳುವಿನ ಅತ್ತಿಗುಪ್ಪೆ ನಟರಾಜು, ಗುಂಜೂರಿನ ಚೇತನ್, ಶ್ರೀರಂಗಪಟ್ಟಣ ಗಂಜಾಂನ ಪ್ರಕಾಶ್ ಗೌತಮ್, ಕೆ.ಆರ್.ನಗರ ಸಾಲಿಗ್ರಾಮದ ಲಕ್ಷ್ಮೀಪುರ ಮಂಜುನಾಥ್, ಪಾಂಡವಪುರ ಬನ್ನಂಗಾಡಿಯ ಅವಿನಾಶ್, ಶ್ರೀರಂಗಪಟ್ಟಣ ಟಿ.ಎಂ.ಹೊಸೂರಿನ ಚೇತನ ದರ್ಶನ್ ಪುಟ್ಟಣ್ಣಯ್ಯ ಬಳಗದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಹಿರಿಯ ರೈತ ಹೋರಾಟಗಾರ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಕೆ.ಕೆ.ಗೌಡೇಗೌಡ, ಕೇಶವಸ್ವಾಮಿ, ಚಿಕ್ಕಾಡೆ ಹರೀಶ್, ಕೆ.ಎನ್.ವಿಜಯಕುಮಾರ್, ಎಸ್.ದಯಾನಂದ್, ಕ್ಯಾತನಹಳ್ಳಿ ರಾಘವ ಪ್ರಕಾಶ್, ಅರಳಕುಪ್ಪೆ ರೂಪಾ, ಬೀರಶೆಟ್ಟಹಳ್ಳಿ ಗಿರೀಶ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಿವಯ್ಯ, ಪಶು ವೈದ್ಯ ಡಾ.ಹಿಮಾಚಲ್, ಡಾ. ಪ್ರವೀಣ್ ಕುಮಾರ್, ಡಾ. ಸಿ.ಎಂ.ಪ್ರಕಾಶ್, ಡಾ. ರವಿನಾಯಕ್, ಡಾ. ಎಸ್.ಕೆ.ಪ್ರಭುಸ್ವಾಮಿ, ಸಿಬ್ಬಂದಿ ಶ್ರೀನಿವಾಸ್, ಶಿವಲಿಂಗೇಗೌಡ, ಲೋಕೇಶ್, ಸಚ್ಚಿನ್, ಕದರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net