ನಿರಾಶ್ರಿತರಿಗೆ ಸೂರು ಕಲ್ಪಿಸುವುದು ಮಾದರಿ ಕಾರ್ಯ

ಪದ್ಮಶ್ರೀ ಪುರಸ್ಕೃತ ಸೋಮಣ್ಣ ಮೊತ್ತೆಹಾಡಿ ಶ್ಲಾಘನೆ
ವೈದ್ಯನಾಥಪುರ ಬಳಿಯ ಬೀದಿ ಬದಿ ಗುಡಿಸಲಿನ ನಿರಾಶ್ರಿತರಿಗೆ ನಿವೇಶನದ ನೋಂದಣಿ ಪತ್ರ ಹಾಗೂ ಮನೆಯ ಕೀ ಅನ್ನು ಪದ್ಮಶ್ರೀ ಪುರಸ್ಕೃತ ಸೋಮಣ್ಣ ಮೊತ್ತೆಹಾಡಿ ಹಸ್ತಾಂತರಿಸಿದರು. ಹುಲಿಗೆರೆಪುರ ಮಹದೇವು, ಕುಮಾರ್ ಕೊಪ್ಪ, ಉಷಾ ಜಯಶೀಲ, ಅಮ್ಮ ರಾಮಚಂದ್ರ, ಚೂರಿ ನಿಂಗಯ್ಯ, ಮಂಜುನಾಥ್, ನ.ಲಿ.ಕೃಷ್ಣ ಇದ್ದರು.
ವೈದ್ಯನಾಥಪುರ ಬಳಿಯ ಬೀದಿ ಬದಿ ಗುಡಿಸಲಿನ ನಿರಾಶ್ರಿತರಿಗೆ ನಿವೇಶನದ ನೋಂದಣಿ ಪತ್ರ ಹಾಗೂ ಮನೆಯ ಕೀ ಅನ್ನು ಪದ್ಮಶ್ರೀ ಪುರಸ್ಕೃತ ಸೋಮಣ್ಣ ಮೊತ್ತೆಹಾಡಿ ಹಸ್ತಾಂತರಿಸಿದರು. ಹುಲಿಗೆರೆಪುರ ಮಹದೇವು, ಕುಮಾರ್ ಕೊಪ್ಪ, ಉಷಾ ಜಯಶೀಲ, ಅಮ್ಮ ರಾಮಚಂದ್ರ, ಚೂರಿ ನಿಂಗಯ್ಯ, ಮಂಜುನಾಥ್, ನ.ಲಿ.ಕೃಷ್ಣ ಇದ್ದರು.
Published on: 

ಮದ್ದೂರು: ನಿರಾಶ್ರಿತರಿಗೆ ನೆರಳು ಕಲ್ಪಿಸುವುದು ಉತ್ತಮ ಕೆಲಸ. ಈ ನಿಟ್ಟಿನಲ್ಲಿ ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಂದಾಗಿರುವುದು ಪ್ರಶಂಸನೀಯ ಸಂಗತಿ ಎಂದು ಪದ್ಮಶ್ರೀ ಪುರಸ್ಕೃತ ಸೋಮಣ್ಣ ಮೊತ್ತೆಹಾಡಿ ಶ್ಲಾಘನೆ ವ್ಯಕ್ತಪಡಿಸಿದರು.

ತಾಲೂಕಿನ ವೈದ್ಯನಾಥಪುರದ ಬಳಿಯ ಬೀದಿ ಬದಿ ಗುಡಿಸಲಿನಲ್ಲಿ ಹಲವಾರು ದಶಕಗಳಿಂದ ವಾಸಿಸುತ್ತಿದ್ದ ನಿರಾಶ್ರಿತರಿಗೆ ಸಂಸ್ಥೆ ವತಿಯಿಂದ ನೀಡಲಾದ ನಿವೇಶನದ ನೋಂದಣಿ ಪತ್ರ ಹಾಗೂ ಮನೆ ಕೀ ಅನ್ನು ಬುಧವಾರ ವಿತರಣೆ ಮಾಡಿ ಮಾತನಾಡಿದರು. ಕಾಡಿನಂಚಿನ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲು, ಗಿರಿಜನರ ಕಷ್ಟ ನಿವಾರಿಸಲು ಶ್ರಮಿಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಮಾರ್ ಕೊಪ್ಪ ಮಾತನಾಡಿ, ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಮೆಚ್ಚುಗೆ ವಿಷಯ ಎಂದರು.

ಸಂಸ್ಥೆ ಅಧ್ಯಕ್ಷ ಹುಲಿಗೆರೆಪುರ ಮಹದೇವು ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿರುವ ನಿರಾಶ್ರಿತರು ಹಾಗೂ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಕಡುಬಡವರಿಗೆ ಸಂಸ್ಥೆಯಿಂದ ಸೂರು ಒದಗಿಸುವ ನಿಟ್ಟಿನಲ್ಲಿ ಕೈಲಾದ ಸೇವೆ ಮಾಡಲಾಗುತ್ತಿದೆ ಎಂದರು.

ಅಂತಾರಾಷ್ಟ್ರೀಯ ಜಾನಪದ ಗಾಯಕರಾದ ಅಮ್ಮ ರಾಮಚಂದ್ರು, ಹರಿಹರದ ಹುಚ್ಚಮ್ಮ ದೇವಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಚೂರಿನಿಂಗಯ್ಯ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ರಾಜ್ಯ ರೈತ ಕಲ್ಯಾಣ ಸಂಘ ಮಹಿಳಾ ಅಧ್ಯಕ್ಷೆ ಉಷಾ ಜಯಶೀಲಾ, ಮುಖಂಡರಾದ ನ.ಲಿ.ಕೃಷ್ಣ, ಗ್ರಾಪಂ ಮಾಜಿ ಸದಸ್ಯೆ ಲಕ್ಷ್ಮೀ ಮಹದೇವು, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಶಂಕರ್, ಬೋರಯ್ಯ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net