ನ.1ರಂದು ಬೃಹತ್ ಉಚಿತ ಆರೋಗ್ಯ ಶಿಬಿರ

ಬಿ.ಎಂ.ಎಜುಕೇಷನಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ರಾಮಕೃಷ್ಣ ಮಾಹಿತಿ
ಮಳವಳ್ಳಿ ತಾಲೂಕಿನ ಶೆಟ್ಟಹಳ್ಳಿ ಸಮೀಪವಿರುವ ಬಿ.ಎಂ. ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರ ಬಿ.ಎಂ.ಎಜುಕೇಷನಲ್ ಟ್ರಸ್ಟ್ ವತಿಯಿಂದ ನ.1ರಂದು ಹಮ್ಮಿಕೊಂಡಿರುವ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರದ ಪ್ರಚಾರ ಪೋಸ್ಟರ್‌ಅನ್ನು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ರಾಮಕೃಷ್ಣ ಬಿಡುಗಡೆ ಮಾಡಿದರು. ಚಂದ್ರಮೋಹನ್, ಪ್ರಕಾಶ್, ಸುರೇಶ್ ಇದ್ದರು.
ಮಳವಳ್ಳಿ ತಾಲೂಕಿನ ಶೆಟ್ಟಹಳ್ಳಿ ಸಮೀಪವಿರುವ ಬಿ.ಎಂ. ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರ ಬಿ.ಎಂ.ಎಜುಕೇಷನಲ್ ಟ್ರಸ್ಟ್ ವತಿಯಿಂದ ನ.1ರಂದು ಹಮ್ಮಿಕೊಂಡಿರುವ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರದ ಪ್ರಚಾರ ಪೋಸ್ಟರ್‌ಅನ್ನು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ರಾಮಕೃಷ್ಣ ಬಿಡುಗಡೆ ಮಾಡಿದರು. ಚಂದ್ರಮೋಹನ್, ಪ್ರಕಾಶ್, ಸುರೇಶ್ ಇದ್ದರು.
Published on: 

ಮಳವಳ್ಳಿ: 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕಿನ ಶೆಟ್ಟಹಳ್ಳಿ ಸಮೀಪವಿರುವ ಬಿ.ಎಂ.ಎಜುಕೇಷನಲ್ ಟ್ರಸ್ಟ್ ವತಿಯಿಂದ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ರಾಮಕೃಷ್ಣ ತಿಳಿಸಿದರು.

ಶೆಟ್ಟಹಳ್ಳಿ ರಸ್ತೆಯ ಬಿ.ಎಂ. ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರ ಆರೋಗ್ಯ ತಪಾಸಣಾ ಶಿಬಿರದ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಆರೋಗ್ಯವೇ ಭಾಗ್ಯ-ಆರೋಗ್ಯವಂತ ಸಮಾಜವೇ ನಮ್ಮ ಗುರಿ ಎಂಬ ಧ್ಯೇಯದೊಂದಿಗೆ ಶಿಬಿರ ಆಯೋಜಿಸಲಾಗಿದೆ. ನ.1ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಬಿ.ಎಂ. ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶಿಬಿರ ನಡೆಯಲಿದೆ ಎಂದ ಅವರು, ತಾಲೂಕಿನ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಶಿಬಿರದಲ್ಲಿ ಸಂಜೀವಿನಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೆಂಗಳೂರು, ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು, ವಾಸನ್ ಐ ಕೇರ್ ಬೆಂಗಳೂರು ಸೇರಿದಂತೆ ಖ್ಯಾತ ಆಸ್ಪತ್ರೆಗಳ ತಜ್ಞ ವೈದ್ಯರು ಭಾಗವಹಿಸಲಿದ್ದು, ಶಿಬಿರದಲ್ಲಿ ಬಿ.ಪಿ, ಶುಗರ್ ತಪಾಸಣೆ, ಮೂಳೆ-ಕೀಲು, ಸ್ತ್ರೀರೋಗ, ಚರ್ಮರೋಗ, ಕ್ಯಾನ್ಸರ್ ತಪಾಸಣೆ, ದಂತ, ಕಣ್ಣು, ಇಸಿಜಿ, ರಕ್ತ ಪರೀಕ್ಷೆ, ಪೈಲ್ಸ್, ಹರ್ನಿಯಾ, ಕಿಡ್ನಿ ಕಲ್ಲು ಸೇರಿದಂತೆ ಹಲವು ತಪಾಸಣೆಗಳು ಉಚಿತವಾಗಿ ಲಭ್ಯವಿರುತ್ತವೆ ಎಂದರು.

ಟೀಮ್ ಮಳವಳ್ಳಿ, ವಿವಿಧ ಸಂಘ-ಸಂಸ್ಥೆಗಳು, ಯುವ ಮಿತ್ರರು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಾಗರಿಕ ಬಂಧುಗಳ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಶಿಬಿರದ ಸ್ಥಳಕ್ಕೆ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದ್ದು, ತಾಲೂಕಿನ ಗ್ರಾಮೀಣ ಭಾಗದ ಜನರು ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್, ಯುನಿವರ್ಸಲ್ ಟ್ರಸ್ಟ್ ಕಾರ್ಯದರ್ಶಿ ತಳಗವಾಡಿ ಪ್ರಕಾಶ್, ಮಾಜಿ ಸೈನಿಕ ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net