ಕ್ರೀಡಾ ಬಳಗದಿಂದ ಸಮಾಜಮುಖಿ ಕಾರ್ಯ

Socially-oriented initiative by the sports club
ಸಭೆಯಲ್ಲಿ ಮದ್ದೂರು ಕ್ರೀಡಾ ಬಳಗದ ಅಧ್ಯಕ್ಷ ವಿ.ಕೆ.ಜಗದೀಶ್ ಮಾತನಾಡಿದರು. ರಾಜಣ್ಣ, ಜಿ.ಬಿ.ಸಿದ್ದರಾಮು, ಬೋರೇಗೌಡ, ಪುಟ್ಟರಾಮು ಇದ್ದರು.
ಸಭೆಯಲ್ಲಿ ಮದ್ದೂರು ಕ್ರೀಡಾ ಬಳಗದ ಅಧ್ಯಕ್ಷ ವಿ.ಕೆ.ಜಗದೀಶ್ ಮಾತನಾಡಿದರು. ರಾಜಣ್ಣ, ಜಿ.ಬಿ.ಸಿದ್ದರಾಮು, ಬೋರೇಗೌಡ, ಪುಟ್ಟರಾಮು ಇದ್ದರು.
Published on: 

ಮದ್ದೂರು: ಮದ್ದೂರು ಕ್ರೀಡಾ ಬಳಗ ಹಲವು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಅಧ್ಯಕ್ಷ ವಿ.ಕೆ.ಜಗದೀಶ್ ತಿಳಿಸಿದರು.

ನಗರದ ಮಳವಳ್ಳಿ ರಸ್ತೆಯಲ್ಲಿರುವ ಮದ್ದೂರು ಕ್ರೀಡಾ ಬಳಗದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮದ್ದೂರು ಕ್ರೀಡಾ ಬಳಗದ ಆರೋಗ್ಯ ಉಚಿತ ತಪಾಸಣಾ ಶಿಬಿರ ಸೇರಿದಂತೆ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.

ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ರಿಡೆಗಳಲ್ಲಿ ಭಾಗವಹಿಸಿ ಗೆದ್ದವರಿಗೆ, ಸದಸ್ಯರಿಗೆ ಹಾಗೂ ಕುಟುಂಬದವರಿಗೆ ಬಹುಮಾನ ನೀಡಲಾಯಿತು.

ಸಂಘದ ಮಹಾ ಪೋಷಕ ರಾಜಣ್ಣ, ಉಪಾಧ್ಯಕ್ಷ ಜಿ.ಬಿ.ಸಿದ್ದರಾಜು, ಕಾರ್ಯದರ್ಶಿ ಬೋರೇಗೌಡ, ಖಜಾಂಚಿ ಕೆ.ಪುಟ್ಟರಾಮು, ಆಡಳಿತ ಮಂಡಳಿ ಸದಸ್ಯರು ಇದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ಸರ್ವ ಸದಸ್ಯ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪ್ರೊ.ಬಿ.ಎಸ್.ಬೋರೇಗೌಡ, ಮಹಾ ಪೋಷಕರಾಗಿ ಎಂ.ಡಿ.ಮಹಾಲಿಂಗಯ್ಯ, ಉಪಾಧ್ಯಕ್ಷರಾಗಿ ಎಂ.ಎಚ್.ಸಿದ್ದೇಗೌಡ, ಕಾರ್ಯದರ್ಶಿಯಾಗಿ ಜಿ.ಟಿ.ಚಂದ್ರಶೇಖರ್, ನಿರ್ದೇಶಕರಾಗಿ ಎನ್.ಎಸ್.ಕೃಷ್ಣೇಗೌಡ, ಎ.ದೊರೆಸ್ವಾಮಿ, ಶಿವಾನಂದ, ವೀರಭದ್ರ, ವಿ.ಎಂ.ತಮ್ಮಣ್ಣ ಹಾಗೂ ರಾಜೇಶ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ವಕೀಲ ದೇವರಾಜು, ಸಹಾಯಕರಾಗಿ ಪ್ರೊ.ಎಸ್.ಬಿ.ನಾಗರಾಜು ಕಾರ್ಯನಿರ್ವಹಿಸಿದರು.

-----------------------

05ಎಂಡಿಆರ್3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net