ಕೊಪ್ಪದಲ್ಲಿ ಸಾಮರಸ್ಯದ ಉತ್ಸವ

ಹಿಂದು-ಮುಸ್ಲಿಮರಿಂದ ಗಣೇಶ ಮೂರ್ತಿಗಳ ವಿಸರ್ಜನೆ
ಮದ್ದೂರು ತಾಲೂಕಿನ ಕೊಪ್ಪದಲ್ಲಿ ಹಿಂದು ಮುಸ್ಲಿಮರು ಒಟ್ಟಿಗೆ ಸೇರಿಕೊಂಡು ಗೌರಿ, ಗಣೇಶನ ರ್ಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಗಮನ ಸೆಳೆದರು. ಪರ್ವಿಜ್‌ಅಹಮದ್, ರುದ್ರೇಶ್, ಕೃಷ್ಣ, ಸುನಿಲ್, ಅಭಿ, ಸಂತೋಷ್, ನಾಜಿಮ್, ಶೇರು, ಶರತ್, ಪುನಿ, ರವಿ, ಅತಿಕ್ ಇತರರು ಇದ್ದರು.
ಮದ್ದೂರು ತಾಲೂಕಿನ ಕೊಪ್ಪದಲ್ಲಿ ಹಿಂದು ಮುಸ್ಲಿಮರು ಒಟ್ಟಿಗೆ ಸೇರಿಕೊಂಡು ಗೌರಿ, ಗಣೇಶನ ರ್ಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಗಮನ ಸೆಳೆದರು. ಪರ್ವಿಜ್‌ಅಹಮದ್, ರುದ್ರೇಶ್, ಕೃಷ್ಣ, ಸುನಿಲ್, ಅಭಿ, ಸಂತೋಷ್, ನಾಜಿಮ್, ಶೇರು, ಶರತ್, ಪುನಿ, ರವಿ, ಅತಿಕ್ ಇತರರು ಇದ್ದರು. Festival of Harmony in Koppa
Published on: 

ಮದ್ದೂರು: ತಾಲೂಕಿನ ಕೊಪ್ಪದಲ್ಲಿ ಹಿಂದು ಮುಸ್ಲಿಮರು ಒಗ್ಗೂಡಿ ಗೌರಿ, ಗಣೇಶನ ರ್ಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಗಮನ ಸೆಳೆದರು.

ಗ್ರಾಮದ ಇಂದಿರಾ ನಗರದಲ್ಲಿ 11 ದಿನಗಳಿಂದ ಗೌರಿ, ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ವೇಳೆ ಪ್ರತಿನಿತ್ಯ ಹಿಂದು ಮುಸ್ಲಿಮರು ಒಟ್ಟಿಗೆ ಸೇರಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಂತಿ ಸೌಹಾರ್ದತೆ ಮೆರೆದರು.

ಗುರುವಾರ 11ನೇ ದಿನವಾದ ಕಾರಣ ಇಂದಿರಾನಗರದಿಂದ ಕೊಪ್ಪ ಕೆರೆಯವರೆಗೆ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮುಸ್ಲಿಮರು ಸಾರ್ವಜನಿಕರಿಗೆ ನೀರು, ಸಿಹಿ ವಿತರಿಸಿದರು.

ಸುಮಾರು 15 ವರ್ಷಗಳಿಂದ ಕೊಪ್ಪದಲ್ಲಿ ಹಿಂದು ಮುಸ್ಲಿಮರು ಒಟ್ಟಿಗೆ ಸೇರಿಕೊಂಡು ಏಕತೆ ಸಾರುವ ಗಣೇಶೋತ್ಸವ ಆಚರಣೆ ಮಾಡುತ್ತಿರುವುದು ಮಾದರಿಯಾಗಿದೆ. ಈ ವೇಳೆ ಪರ್ವಿಜ್ ಅಹಮದ್, ರುದ್ರೇಶ್, ಕೃಷ್ಣ, ಸುನಿಲ್, ಅಭಿ, ಸಂತೋಷ್, ನಾಜಿಮ್, ಶೇರು, ಶರತ್, ಪುನಿ, ರವಿ, ಅತಿಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net