ಕೆಆರ್‌ಎಸ್ ಮಾಹಿತಿ ಸಂಗ್ರಹಿಸಿದ ಸಿಡಿಎಸ್‌ಇ ತಂಡ

CDSE team collected data at KRS.
ಕೃಷ್ಣರಾಜಸಾಗರ ಅಣೆಕಟ್ಟೆಗೆ ಕೇಂದ್ರದ ಸಿಡಿಎಸ್‌ಇ ತಂಡ ಸೋಮವಾರ ಭೇಟಿ ನೀಡಿ ಅಣೆಕಟ್ಟೆ ಭದ್ರತೆ ಮತ್ತು ಪ್ರವಾಹ ಸ್ಥಿತಿಯಲ್ಲಿ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿತು.
ಕೃಷ್ಣರಾಜಸಾಗರ ಅಣೆಕಟ್ಟೆಗೆ ಕೇಂದ್ರದ ಸಿಡಿಎಸ್‌ಇ ತಂಡ ಸೋಮವಾರ ಭೇಟಿ ನೀಡಿ ಅಣೆಕಟ್ಟೆ ಭದ್ರತೆ ಮತ್ತು ಪ್ರವಾಹ ಸ್ಥಿತಿಯಲ್ಲಿ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿತು.
Published on: 

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಯ ನಿರ್ವಹಣೆ ಕುರಿತು ಕೇಂದ್ರದ ಕಂಪ್ರೆನ್ಸಿವ್ ಡ್ಯಾಮ್ ಸೇಫ್ಟಿ ಎವಲೂಷನ್ (ಸಿಡಿಎಸ್‌ಇ) ತಂಡ ಪರಿಶೀಲನೆ ನಡೆಸಿತು.

ಅಣೆಕಟ್ಟೆ ಬಗ್ಗೆ ಮಾಹಿತಿ ಪಡೆದ ತಂಡ, ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಕಾವೇರಿ ನೀರಾವರಿ ನಿಗಮದ ಮಂಡ್ಯ ವೃತ್ತ ಅಧೀಕ್ಷಕ ಇಂಜಿನಿಯರ್ ಕೆ.ರಘುರಾಮ್ ಮತ್ತು ಕಾರ್ಯಪಾಲಕ ಇಂಜಿನಿಯರ್ ವೆಂಕರಮಣಪ್ಪ ಅವರು ತಂಡಕ್ಕೆ ಮಾಹಿತಿ ನೀಡಿದರು.

ತಂಡದ ನೇತೃತ್ವ ವಹಿಸಿದ್ದ ಅಣೆಕಟ್ಟೆ ಸುರಕ್ಷತಾ ತಂತ್ರಜ್ಞ ಚಂದ್ರಶೇಖರ್ ಅವರಿಂದ ತಂಡ ಅಣೆಕಟ್ಟೆ ನಿರ್ಮಾಣಕ್ಕೆ ಬಳಸಿದ್ದ ಸಾಮಗ್ರಿ, ನಿರ್ಮಾಣದ ಅವಧಿ, ನಿರ್ಮಾಣವಾದ ನಂತರ ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳು, ಗೇಟ್‌ಗಳ ವಿನ್ಯಾಸ, ನೀರಿನ ಸಂಗ್ರಹ, ಒಳ ಮತ್ತು ಹೊರ ಹರಿವಿನ ಕುರಿತ ಮಾಹಿತಿ, ಪ್ರವಾಹ ಪರಿಸ್ಥಿತಿಯಲ್ಲಿ ಅಣೆಕಟ್ಟೆ ಗೇಟ್‌ಗಳ ನಿರ್ವಹಣೆ, ಅಣೆಕಟ್ಟೆ ಕಟ್ಟಿದ ನಂತರ ಗೇಟ್‌ಗಳು ಬದಲಾವಣೆಯಾಗಿದ್ದ ಕುರಿತು ಸಂಪೂರ್ಣ ಮಾಹಿತಿ ಪಡೆದರಲ್ಲದೆ, ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಅಣೆಕಟ್ಟೆ ಸುರಕ್ಷತೆ ತಂತ್ರಜ್ಞರಾದ ನಿವೃತ ಮುಖ್ಯ ಇಂಜಿನಿಯರ್ ಮಾಧವ, ಶಂಕರೇಗೌಡ, ನಿವೃತ್ತ ಅಧೀಕ್ಷಕ ಇಂಜಿನಿಯರ್ ವಿಜಯಕುಮಾರ್ ರಾವ್, ಬೆಂಗಳೂರು ಐಐಎಸ್‌ಸಿ ಡಾ.ಅನಭಾಗನ್, ಡಿಎಸ್‌ಆರ್‌ಪಿ ಕರ್ನಾಟಕ ದ ಕಮಶೇಖರನ್, ನಿವೃತ್ತ ಪ್ರೊ.ಡಾ.ಬಸವರಾಜಪ್ಪ, ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ನಿರ್ದೇಶಕ ಮಹೇಶ್ ಕಾ.ನೀ.ನಿಗಮ ಮಂಡ್ಯ ವೃತ್ತ ಅಧೀಕ್ಷಕ ಇಂಜಿನಿಯರ್ ಕೆ.ರಘುರಾಮ್, ಮತ್ತು ಕಾರ್ಯಪಾಲಕ ಇಂಜಿನಿಯರ್ ವೆಂಕರಮಣಪ್ಪ, ಕಾ.ನೀ.ನಿಗಮದ ಕೆ.ಆರ್.ಸಾಗರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ವೇತಾ ಮತ್ತಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net