

ಮದ್ದೂರು: ಕಬ್ಬು ಹಾಗೂ ಕಬ್ಬಿನ ಉತ್ಪನ್ನಗಳನ್ನು ಅಬಕಾರಿ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್ಕುಮಾರ್ ಒತ್ತಾಯಿಸಿದ್ದಾರೆ.
ಕಬ್ಬು ಹಾಗೂ ಕಬ್ಬಿನ ಉತ್ಪನ್ನಗಳನ್ನು ಅಬಕಾರಿ ವ್ಯಾಪ್ತಿಯಿಂದ ಹೊರಗಿಟ್ಟರೆ ಒಂದು ಟನ್ ಕಬ್ಬಿಗೆ 10 ರಿಂದ 20 ಸಾವಿರವರೆಗೆ ದೊರೆಯಲಿದೆ. 2014ರಲ್ಲಿ ಡಾ. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿ ಮಾಡುವ ಬಗ್ಗೆ ಭರವಸೆ ನೀಡಿದ್ದರೂ ಇದುವರೆಗೆ ಅದನ್ನ ಈಡೇರಿಸಿಲ್ಲ. ಬದಲಾಗಿ ರೈತಮುಕ್ತ ಭಾರತ ಮಾಡಲು ಹೊರಟಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಎಂಎಸ್ಬಿ ಹಾಗೂ ಎಫ್ಆರ್ಫಿ ನಿಗದಿ ಮಾಡುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದಿರುವ ಅವರು, ಕಬ್ಬು ಹಾಗೂ ಅದರ ಉತ್ಪನ್ನಗಳನ್ನು ಅಬಕಾರಿ ವ್ಯಾಪ್ತಿಯಿಂದ ಹೊರಗಿಟ್ಟರಷ್ಟೇ ಕಬ್ಬು ಬೆಳೆಗಾರರಿಗೆ ಚಿನ್ನದ ಬೆಲೆ ಸಿಗಲಿದೆ ಎಂದಿದ್ದಾರೆ.
ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದು ಆಗ್ರಹಿಸಿರುವ ಅವರು, ಇಡೀ ರಾಜ್ಯದ ರೈತರು ಈ ಬಗ್ಗೆ ಜಾಗೃತರಾಗಿ ರಾಜ್ಯದ ಎಲ್ಲ ಸಂಸದರ ವಿರುದ್ಧ ಧ್ವನಿ ಎತ್ತುವ ಮೂಲಕ ಹೋರಾಟ ಪ್ರಾರಂಭ ಮಾಡುವ ಅವಶ್ಯಕತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶಹಳ್ಳಿ ಆರ್.ಮೋಹನ್ಕುಮಾರ್