

ಮದ್ದೂರು: ತಾಲೂಕಿನ ಚಿಕ್ಕಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆತಗೂರು ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಹೆಮ್ಮನಹಳ್ಳಿಯ ಎಸ್‌ವಿಎಂ ಇಂಟರ್ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಹಲವು ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಬಹುಮಾನ ವಿಜೇತರು:
ಗಝಲ್ ಸ್ಪರ್ಧೆ: ಸೈಯದ್ ಯೂಸುಫ್ (ಪ್ರ), ಕವನ ವಾಚನ ಚರಿತಾ (ಪ್ರ), ಜನಪದ ನೃತ್ಯ ಚರಿತಾ ಮತ್ತು ತಂಡ (ಪ್ರ), ಧಾರ್ಮಿಕ ಪಠಣ (ಅರೇಬಿಕ್) ಸ್ಪರ್ಧೆ ಸೈಯದ್ ಯೂಸುಫ್ (ದ್ವಿ), ಭರತನಾಟ್ಯ ಸ್ಪರ್ಧೆ ಚಾರ್ವಿ (ದ್ವಿ), ಚರ್ಚಾಸ್ಪರ್ಧೆ ನಯನಾ (ದ್ವಿ), ಕವ್ವಾಲಿ ಸ್ಪರ್ಧೆ ಸೈಯದ್ ಫಾತಿಮಾ ಮತ್ತು ತಂಡ (ದ್ವಿ), ಇಂಗ್ಲಿಷ್ ಭಾಷಣ ಸ್ಪರ್ಧೆ ತನ್ಮಯ್ (ತೃ), ಭಾವಗೀತೆ ಸ್ಪರ್ಧೆ ಸ್ಫೂರ್ತಿ ತೃತೀಯ ಬಹುಮಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಅಧ್ಯಕ್ಷೆ ರೂಪಾ ದೇವರಾಜು ಮಾತನಾಡಿ, ಸಂಸ್ಥೆಯ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವು ವಿಭಾಗಗಳಲ್ಲಿ ಗೆಲುವು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತೋಷ ತಂದಿದ್ದು, ರಾಜ್ಯ ಮಟ್ಟದಲ್ಲೂ ಗೆಲುವು ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲಾಗುವುದು ಎಂದರು.
ಸಂಸ್ಥೆಯ ಅಧ್ಯಕ್ಷೆ ರೂಪಾ ದೇವರಾಜು, ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎನ್.ವಿ., ಶಿಕ್ಷಕರಾದ ರಶ್ಮಿತಾ, ವಿನೋದ್, ಶೃತಿ, ಜಯವಾಣಿ, ನಿಶ್ಚಿತಾ, ರಂಜಿತಾ, ಮಮತಾ, ಕಾವ್ಯ, ನಾಗರತ್ನಮ್ಮ, ನಾಜ್ ಆರ್ ಪ್ರೀತಿ, ಅನುಜ ಇದ್ದರು.