

ನಾಗಮಂಗಲ: ಇಂದಿನ ಸಮಾಜದಲ್ಲಿ ಕುಟುಂಬಗಳ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಮನಸ್ಥಾಪ ಮಾಡಿಕೊಂಡು ಬೀದಿಗೆ ಬರುವುದನ್ನು ನೋಡಿದರೆ ಸಮಾಜ ಎತ್ತ ಸಾಗುತ್ತಿದೆ ಎಂದು ಆತಂಕವಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಅಳಿಸಂದ್ರದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೋಡಿಮಾರಮ್ಮ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಂಗಳವಾರ ರಾತ್ರಿ ಪಾಲ್ಗೊಂಡು ಮಾತನಾಡಿದರು.
ತಂದೆ ಮಗನನ್ನೇ ಕೊಲೆ ಮಾಡುವುದು, ಮಗ ತಂದೆಯನ್ನೇ ಕೊಲೆ ಮಾಡುವುದನ್ನು ನೋಡುತ್ತಿದ್ದರೆ ಬಾಂಧವ್ಯಗಳು ಮರೆಯಾಗುತ್ತಿವೆ ಎನ್ನಿಸುತ್ತಿದೆ. ಈ ರೀತಿ ಘಟನೆಗಳು ನಿಲ್ಲಬೇಕು. ಸಂಬಂಧಗಳಿಗೆ ಬೆಲೆ ಕೊಡಬೇಕು. ಮನಸ್ಥಾಪ ಬದಿಗಿಟ್ಟು ನೆಮ್ಮದಿಯಿಂದ ಬದುಕುವ ಬುದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ತಾಲೂಕಿನ ಜನರು ದೇವಸ್ಥಾನದ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ, ಎಚ್.ಡಿ.ದೇವೇಗೌಡರು, ಸುರೇಶ್ಗೌಡ ಹಾಗೂ ನನ್ನ ಮೇಲೆ, ಪಕ್ಷದ ಮೇಲೆ ಈ ಕ್ಷೇತ್ರದ ಜನರ ಅಪಾರವಾದ ಅಭಿಮಾನವನ್ನಿಟ್ಟಿದ್ದೀರಿ. ಈ ಜನರ ಪ್ರೀತಿ, ಅಭಿಮಾನದ ಋಣ ತೀರಿಸುವ ಕೆಲಸ ಮಾಡೇ ಮಾಡುತ್ತೇನೆ. ಈ ಬಗ್ಗೆ ಸಂಶಯ ಬೇಡ ಎಂದರು.
ಮನವಿ ಪತ್ರ ನೀಡಿದ ವಿದ್ಯಾರ್ಥಿಗಳು: ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಹಾಗೂ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಿಸಲು ಗ್ರಾಮದ ವಿದ್ಯಾರ್ಥಿಗಳು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಎಚ್ಡಿಕೆ ಗ್ರಾಮದ ಶಾಲೆಗೆ ಅಗತ್ಯವಿರುವ ಹೆಚ್ಚುವರಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ಜತೆಗೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಸುರೇಶ್ಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.