

ಕಿಕ್ಕೇರಿ: ಸಮೀಪದ ಅಣ್ಣೇಚಾಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ದಾಕ್ಷಾಯಿಣಿ ಪ್ರಸನ್ನ ಹಾಗೂ ಉಪಾಧ್ಯಕ್ಷೆಯಾಗಿ ಸುಲೋಚನಾ ನಾಗರಾಜು ಅವಿರೋಧವಾಗಿ ಶನಿವಾರ ಆಯ್ಕೆಯಾಗಿದ್ದಾರೆ.
ಮಮತಾ ಲೋಕೇಶ್, ರೇಣುಕಾ ನಾಗರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ದಾಕ್ಷಾಯಿಣಿ ಪ್ರಸನ್ನ, ಉಪಾಧ್ಯಕ್ಷ ಸ್ಥಾನಕ್ಕೆ ಸುಲೋಚನಾ ನಾಗರಾಜು ಅವರನ್ನು ಹೊರತುಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೆ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಅಂಬುಜಾ ಕಾರ್ಯನಿರ್ವಹಿಸಿದರು. ಮುಖಂಡರಾದ ಎ.ಬಿ.ಜವರೇಗೌಡ, ಎ.ಬಿ.ನಾಗರಾಜು, ದೇವರಾಜು, ಜೆ.ಚಂದ್ರಹಾಸ್, ಲೋಕೇಶ್, ಶಿವರಾಜು, ಸಣ್ಣಸ್ವಾಮಣ್ಣ, ಪಟೇಲ್ ಜಗದೀಶ್, ಕೆಂಪಯ್ಯನ ಶಿವಣ್ಣ, ಕಾಯಿ ಮಂಜೇಗೌಡ, ಸಂಘದ ನಿರ್ದೇಶಕರಾದ ಸುಧಾ, ಜಯಲಕ್ಷ್ಮೀ, ಜಯಮ್ಮ, ಮಮತಾ, ನಾಗಮ್ಮ, ಸುಧಾಮಣಿ ಇದ್ದರು.