ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ

 ಆತ್ಮಹತ್ಯೆ ಮಾಡಿಕೊಂಡ ಪುನಿತ್
ಆತ್ಮಹತ್ಯೆ ಮಾಡಿಕೊಂಡ ಪುನಿತ್
Published on

ಮಳವಳ್ಳಿ: ವಯಸ್ಸು ಮೀರುತ್ತಿದ್ದರೂ ಮದುವೆಗೆ ಹೆಣ್ಣುಸಿಗುತ್ತಿಲ್ಲ ಎಂದು ಮನನೊಂದು ವ್ಯಕ್ತಿಯೊಬ್ಬ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಲೂಕಿನ ಬ್ಲಫ್ ಗ್ರಾಮದ ಪುನಿತ್ (38) ಮೃತ. ಪುನಿತ್ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಕುಟುಂಬಸ್ಥರು ತಕ್ಷಣ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ದೂರು ನೀಡಿರುವ ಮೃತನ ಸಹೋದರ ಶಿವು, ವಯಸ್ಸಾಗುತ್ತಿದ್ದರೂ ಮದುವೆಯಾಗದ ಕಾರಣ ಮನನೊಂದಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net