ಯೋಗ ಆರೋಗ್ಯ ವೃದ್ಧಿಸುವ ಸನಾತನ ಸಂಸ್ಕೃತಿ

 ಹಲಗೂರಿನ ಜೆ.ಜೆ .ಪಬ್ಲಿಕ್ ಶಾಲೆಯಲ್ಲಿ  ವಿದ್ಯಾರ್ಥಿಗಳು ಯೋಗ ಅಭ್ಯಾಸದ ಮೂಲಕ ಪತಾಂಜಲಿ ಮಹರ್ಷಿಗಳ ಚಿತ್ರ ಬಿಡಿಸಿರುವುದು.
ಹಲಗೂರಿನ ಜೆ.ಜೆ .ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಯೋಗ ಅಭ್ಯಾಸದ ಮೂಲಕ ಪತಾಂಜಲಿ ಮಹರ್ಷಿಗಳ ಚಿತ್ರ ಬಿಡಿಸಿರುವುದು.
Published on
ಹಲಗೂರು: ಪ್ರತಿಯೊಬ್ಬರೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಜೆ.ಜೆ.ಪಬ್ಲಿಕ್ ಶಾಲೆಯ ಮೇಲ್ವಿಚಾರಕ ವಿಕಾಸ್ ಸಲಹೆ ನೀಡಿದರು.
ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಜೆ.ಜೆ.ಪಬ್ಲಿಕ್ ಶಾಲಾವರಣದಲ್ಲಿ ಜೂ.21ರಂದು ನಡೆಯುವ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ರಜಾ ದಿನ ಹಿನ್ನೆಲೆ ಶನಿವಾರವೇ ಯೋಗ ಅಭ್ಯಾಸ ಮತ್ತು ಅದರ ಮಹತ್ವವನ್ನು ತಿಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಎಂಬುದು ನಮ್ಮ ಆರೋಗ್ಯ ವೃದ್ಧಿ ಮಾಡುವ ಸನಾತನ ಸಂಸ್ಕೃತಿಯ ಒಂದು ಪದ್ಧತಿ. ಇದು ನಮಗೆ ಸುಸ್ಥಿರ ಆರೋಗ್ಯವನ್ನು ನೀಡುತ್ತದೆ. ಉತ್ತಮ ಆರೋಗ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಡನೆ ಪ್ರತಿ ವರ್ಷ ಯೋಗ ದಿನ ಆಚರಿಸುತ್ತೇವೆ. ಈ ಬಾರಿ ಉತ್ತಮ ಉತ್ಸಾಹಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದೊಡನೆ ಆಚರಿಸೋಣ, ಯೋಗ ಎಂಬುದು ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಉತ್ತಮ ಎಂದರು.
ಯೋಗವನ್ನು ನಮಗೆ ಪರಿಚಯಿಸಿದವರು ಪತಂಜಲಿ ಮಹರ್ಷಿಗಳು. ಪ್ರತಿದಿನ ಅವರನ್ನು ಸ್ಮರಿಸುತ್ತಾ ಅರ್ಧ ಗಂಟೆ ಯೋಗ ಮಾಡುವುದರಿಂದ ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಯೋಗ ಅಭ್ಯಾಸದ ಮೂಲಕ ಪತಾಂಜಲಿಯ ಮಹರ್ಷಿಗಳ ಚಿತ್ರವನ್ನು ನಿರ್ಮಿಸಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲ ಕೆ.ಎನ್.ಲಲಿತಾಂಬ ಸೋಮಶೇಖರ್, ದೈಹಿಕ ಶಿಕ್ಷಕರಾದ ರಾಜಶೇಖರ್ ಮೂರ್ತಿ, ಸಹ ಶಿಕ್ಷಕರಾದ ಶಿವಮಣಿ, ವಿಕಾಸ್, ನೇತ್ರಾ, ತ್ರಿವೇಣಿ , ಸೀಮಾ, ಮಧು, ಹೇಮಾ , ಪುಷ್ಪಾ, ಸುದರ್ಶನ್, ಸುಮಂತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net