ಹಿರಿಯ ಗಾಯಕ ಕರ್ನಾಟಕ ಕಲಾಶ್ರೀ ವಿದ್ಯಾಶಂಕರ್ ಅವರ ಶ್ರೇಷ್ಠ ಗಾಯನ ಎಲ್ಲರಲ್ಲಿ ರೋಮಾಂಚನಗೊಳಿಸಿದರೆ, ವಿದ್ವಾನ್ ಸತೀಶ್‌ಕುಮಾರ್, ಯುವ ಗಾಯಕರಾದ ಅನಿರುದ್ಧ ಭಟ್, ಸುಹಾಸ್ ಕೌಶಿಕ್, ಲಕ್ಷ್ಮೀ, ರಾಧಿಕಾರಾವ್, ನಾಯ್ದು, ಸೌಮ್ಯಾ ಪ್ರಸಾದ್, ಪ್ರಾರ್ಥನಾ ದ್ವಂದ್ವ ಗಾಯನ, ವಿದುಷಿ ಶಾರದಾ ನಿಂಗೇಗೌಡ ಗಾಯನ, ಕಿರಿಯ ಕಲಾವಿದರಿಂದ ಗಾಯನ ಎಲ್ಲರನ್ನು ರಂಜಿಸಿತು. ಬಾಲ ಪ್ರತಿಭೆ ನಿಹಾನ್ ತಬಲವಾದನ, ಕುಮಾರಿ ಆದ್ಯಾ ಭರತನಾಟ್ಯ ಪ್ರದರ್ಶನದಿಂದ ತ್ಯಾಗರಾಜ ಆರಾಧನೆಗೆ ಹೆಚ್ಚಿನ ಕಳೆ ಬಂದಿತು. ಪಂಚಾವರತ್ನ ಕೃತಿಗಳ ಗೋಷ್ಠಿ ಗಾಯನದೊಡನೆ ಸಂಗೀತ ಕಾರ್ಯಕ್ರಮ ಸಂಪನ್ನಗೊಂಡಿತು.