ನಗರದ ಮಾಂಡವ್ಯ ಇಂಟಿಗ್ರೇಟೆಡ್ ಪಿಯು ಕಾಲೇಜಿನ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜೂನಿಯರ್ ರೆಡ್‌ಕ್ರಾಸ್ ಘಟಕ, ಮಾಂಡವ್ಯ ಇಂಟಿಗ್ರೇಟೆಡ್ ಪಿಯು ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ನಾಗರಿಕತೆಯ ಇತಿಹಾಸದಲ್ಲಿ ವಿನಾಶ, ಯುದ್ಧ ಮತ್ತು ನೋವು ಮನುಷ್ಯನಿಗೆ ತನ್ನ ಮಿತಿಗಳನ್ನು ನೆನಪಿಸಿದ ಅನೇಕ ಕ್ಷಣಗಳಿವೆ. ಆದರೆ ಇಂತಹ ಕತ್ತಲೆಯ ಸಂದರ್ಭಗಳ ನಡುವೆಯೇ ಕರುಣೆ, ಸೇವೆ ಮತ್ತು ಸಹಬಾಳ್ವೆಯ ಜ್ಯೋತಿಯೂ ಬೆಳಗಿದೆ. ಇದು ಮಾನವಕುಲಕ್ಕೆ ಹೊಸ ದಿಕ್ಕನ್ನು ತೋರಿಸಿದೆ. ವಿಶ್ವ ರೆಡ್ ಕ್ರಾಸ್ ದಿನ ಈ ಜ್ಯೋತಿಯ ಆಚರಣೆಯಾಗಿದೆ. ಇದು ಕೇವಲ ಸೇವೆ ಮತ್ತು ತ್ಯಾಗದ ಮೌಲ್ಯಗಳನ್ನು ಸ್ಮರಿಸುವ ದಿನವಲ್ಲ, ಬದಲಿಗೆ ಸಂಕಷ್ಟದ ಸಮಯದಲ್ಲಿ ಮನುಷ್ಯ ತನ್ನ ಸಂವೇದನಾಶೀಲತೆಯಿಂದ ಜಗತ್ತನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ತೋರಿಸುವ ದಿನವಾಗಿದೆ ಎಂದು ಹೇಳಿದರು.