ಅರ್ಹ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ

ಶ್ರೀರಂಗಪಟ್ಟಣದ ರಂಗನಾಥ ನಗರದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಡಾ.ಎ.ಎಸ್.ಸೂರ್ಯ ಉದ್ಘಾಟಿಸಿದರು. ಎಸ್.ಡಿ.ಬೆನ್ನೂರ, ಜಿ.ಮೋಹನ್, ಮೇಘನಾ ಇದ್ದರು.
ಶ್ರೀರಂಗಪಟ್ಟಣದ ರಂಗನಾಥ ನಗರದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಡಾ.ಎ.ಎಸ್.ಸೂರ್ಯ ಉದ್ಘಾಟಿಸಿದರು. ಎಸ್.ಡಿ.ಬೆನ್ನೂರ, ಜಿ.ಮೋಹನ್, ಮೇಘನಾ ಇದ್ದರು.
Published on
ಶ್ರೀರಂಗಪಟ್ಟಣ: ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಉತ್ತಮ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಎ.ಎಸ್.ಸೂರ್ಯ ತಿಳಿಸಿದರು.
ಪಟ್ಟಣದ ರಂಗನಾಥ ನಗರದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ನಿರ್ದಿಷ್ಟ ಪದವಿ ಹೊಂದಿರುವ ಅರ್ಹ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ನಕಲಿ ವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳಿರುತ್ತದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಮಾತನಾಡಿ, ಆರೋಗ್ಯವೆಂದರೆ ಕೇವಲ ರೋಗ ರಹಿತವಾಗಿರುವುದಲ್ಲ. ಮನುಷ್ಯ ಸಾಮಾಜಿಕ, ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರುವುದೇ ಆರೋಗ್ಯ. ನಿತ್ಯ ಕನಿಷ್ಠ 30 ನಿಮಿಷ ನಡೆಯಬೇಕು. ಆರೋಗ್ಯಕರ ಆಹಾರ ಸೇವನೆ, ಸದಾ ಚಟುವಟಿಕೆಯಿಂದ ಇರಬೇಕು ಎಂದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ ಮಾತನಾಡಿ, ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುತ್ತಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಮೇಘನಾ, ಕಿರಿಯ ದರ್ಜೆ ಸಹಾಯಕಿ ಮಹಾಲಕ್ಷ್ಮೀ, ಧನಲಕ್ಷ್ಮೀ, ರಂಗನಾಥನಗರ, ಬೂದಿಗುಂಡಿ ನಿವಾಸಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net