ಮನುಷ್ಯನಿಂದಲೇ ಪರಿಸರಕ್ಕೆ ಹೆಚ್ಚು ಹಾನಿ: ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಮತ

 ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಎಸ್.ಕೆ.ಗುಂಡೂರಾವ್ ಉದ್ಯಾನದಲ್ಲಿ ಸಸ್ಯ ನೆಡಲಾಯಿತು.
ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಎಸ್.ಕೆ.ಗುಂಡೂರಾವ್ ಉದ್ಯಾನದಲ್ಲಿ ಸಸ್ಯ ನೆಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ವಿಶ್ವ ಭೂ ದಿನಾಚರಣೆ
  • ಕೃಷಿಕ ಅಲಯನ್ಸ್ ಸಂಸ್ಥೆ, ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆಯಿಂದ ಆಯೋಜನೆ
ಮಂಡ್ಯ: ಜೀವ ಸಂಕುಲಗಳು ವಾಸಿಸಲು ಯೋಗ್ಯವಾದ ಗ್ರಹ ಭೂಮಿ ಮಾತ್ರ. ಅಂತೆಯೇ ಮನುಷ್ಯ ಬಿಟ್ಟರೆ ಉಳಿದ ಯಾವ ಜೀವಿಗಳಿಂದಲೂ ಪರಿಸರಕ್ಕೆ ಹಾನಿಯಿಲ್ಲ. ಜಾಗತಿಕ ತಾಪಮಾನ ಹೆಚ್ಚಾಗಲು ಮನುಷ್ಯನ ಕೆಟ್ಟ ಬುದ್ಧಿ ಹಾಗೂ ದುರಾಲೋಚನೆಯೇ ಕಾರಣ, ವಿನಾಶದಂಚಿನಲ್ಲಿ ಜೀವಿಗಳಲ್ಲಿ ಮನುಷ್ಯನೂ ಕೂಡ ಇದ್ದಾನೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಎಸ್.ಕೆ.ಗುಂಡೂರಾವ್ ಉದ್ಯಾನದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ, ಸಕ್ಕರೆನಾಡು ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ವಿಶ್ವ ಭೂ ದಿನ ಅಂಗವಾಗಿ ಆಯೋಜಿಸಿದ್ದ ನಮ್ಮ ಶಕ್ತಿ ನಮ್ಮ ಭೂಮಿ ಘೋಷವಾಕ್ಯದೊಂದಿಗೆ ಜಾಗೃತಿ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಪ್ರಸ್ತುತ ದಿನಗಳಲ್ಲಿ ಭೂಮಿ ಮೇಲೆ ಅತಿ ಹೆಚ್ಚು ಎ.ಸಿ(ಹವಾನಿಯಂತ್ರಣ) ಬಳಕೆಯಿಂದ ತಾಪಮಾನ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ದಿನೇ ದಿನೇ ಎಸಿ, ಸುಗಂಧದ್ರವ್ಯಗಳು, ಪ್ಲಾಸ್ಟಿಕ್ ಬಳಕೆ ಅತಿ ಹೆಚ್ಚಾಗುತ್ತಿದೆ. ಜತೆಗೆ ಮರುಬಳಕೆ ಕಡಿಮೆಯಾಗಿದೆ. ಆದ್ದರಿಂದ ಹಸಿರಿನ ಸಂಪತ್ತು ಕಡಿಮೆಯಾಗಿ ವಿಪರೀತ ಬಿಸಿಲು, ಚಳಿಯ ತಾಪಮಾನ ಹೆಚ್ಚಾಗುತ್ತಿದೆ. 2030ರ ವೇಳೆಗೆ ಭೂಶಾಖ, ಜಲ, ಉಬ್ಬರವಿಳಿತ, ಗಾಳಿ ಮತ್ತು ಸೌರಶಕ್ತಿಯಂತಹ ಶುದ್ಧ ಇಂಧನ ಮೂಲಗಳ ಮೇಲೆ ನಿರ್ದಿಷ್ಟ ಒತ್ತು ನೀಡುವುದರೊಂದಿಗೆ ವಿಶ್ವದಾದ್ಯಂತ ಉತ್ಪಾದಿಸುವ ನವೀಕರಿಸಬಹುದಾದ ಶಕ್ತಿಯ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯಾಗಿದೆ ಎಂದು ತಿಳಿಸಿದರು.
ಮೊದಲು ಭೂ ದಿನವನ್ನು 1970 ಏ.22ರಂದು ಆಚರಿಸಲಾಯಿತು. ವಿಸ್ಕಾನ್ಸಿನ್‌ನ ಸೆನೆಟರ್ ಗೇಲಾರ್ಡ್ ನೆಲ್ಸನ್ ಮತ್ತು ಯುವ ಕಾರ್ಯಕರ್ತ ಡೆನಿಸ್ ಹೇಯ್ಸ ಅವರು ನಡೆಸಿಕೊಂಡರು. 1969ರಲ್ಲಿ ತೈಲ ಸೋರಿಕೆ ಘಟನೆಯ ಹಾನಿಯನ್ನು ಅವರು ನೋಡಿದಾಗ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಾಗೃತಿ ದಿನದ ಅಗತ್ಯವನ್ನು ಅರಿತು ಭೂಮಿ ರಕ್ಷಣೆಗೆ ಪ್ರೇರೇಪಿಸಲ್ಪಟ್ಟರು ಎಂದು ಸ್ಮರಿಸಿದರು.
ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಶಿವಕುಮಾರ್ ಮಾತನಾಡಿ, ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಲು ಮತ್ತು ಹವಾಮಾನ ಕ್ರಿಯೆಯನ್ನು ಚುರುಕುಗೊಳಿಸಲು ಒತ್ತು ನೀಡುವುದು ಅತ್ಯಾವಶ್ಯಕ. ನೈಸರ್ಗಿಕ ವಿಕೋಪಗಳಿಂದ ಭೂಮಿಯನ್ನು ರಕ್ಷಿಸುವುದು ಮತ್ತು ವಾಸಿಸಲು ಮತ್ತು ಸುಸ್ಥಿರವಾಗಿಡಲು ಉತ್ತಮ ಸ್ಥಳವನ್ನು ಒದಗಿಸುವುದು ಪ್ರತಿ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದರು.
ಅಲಯನ್ಸ್ ಸಂಸ್ಥೆಯ 1ನೇ ಜಿಲ್ಲಾ ಉಪ ಪ್ರಾಂತಪಾಲ ಕೆ.ಎಸ್.ಚಂದ್ರಶೇಖರ್ ಮಾತನಾಡಿ, ವಿಶ್ವ ಭೂ ದಿನವು ಹೊಸ ನೀತಿಗಳನ್ನು ರೂಪಿಸುವ ಮತ್ತು ಅಸ್ತಿತ್ವದಲ್ಲಿರುವ ಪರಿಸರ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳುವ ಮಹತ್ವವನ್ನು ಸೂಚಿಸುತ್ತದೆ. ಇದರ ಜತೆಗೆ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಅಂಶಗಳು, ಭೂಮಿಯ ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವು ಉತ್ತಮ ಎಂದು ಹೇಳಿದರು.
ಅಲಯನ್ಸ್ ಸಂಸ್ಥೆಯ ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ, ವಲಯಾಧ್ಯಕ್ಷ ಎಸ್.ಎಂ.ಲೋಕೇಶ್, ಸಕ್ಕರೆ ನಾಡು ಅಲಯನ್ಸ್ ಸಂಸ್ಥೆ ಅಧ್ಯಕ್ಷ ನಿತಿನ್‌ಗೌಡ, ಸ್ನೇಹ ಬಳಗದ ಪುರುಷೋತ್ತಮ್, ಕೃಷಿಕ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡೇವಿಡ್, ಮಾಂಡವ್ಯ ನಗರ ಸಂಸ್ಥೆ ಶಂಕರೇಗೌಡ, ಪುಟ್ಟಬಸವೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net