ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಲಿ

ಮದ್ದೂರು ನಗರದ ಭಾರತ್ ವಿಕಾಸ್ ಪರಿಷತ್ ಸೇವಾ ಟ್ರಸ್ಟ್ ಕಚೇರಿಯಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ ಚಾಲನೆ ನೀಡಿದರು. ಬಿಂದಾಸ್ ಶ್ರೀನಿವಾಸ್, ವಿ.ಕೆ.ರಾಧಾ, ಚಂದ್ರಶೇಖರ್, ಹೊನ್ನೇಗೌಡ, ಶಿವನಂಜಯ್ಯ, ಮಹದೇವು ಇದ್ದರು.
ಮದ್ದೂರು ನಗರದ ಭಾರತ್ ವಿಕಾಸ್ ಪರಿಷತ್ ಸೇವಾ ಟ್ರಸ್ಟ್ ಕಚೇರಿಯಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ ಚಾಲನೆ ನೀಡಿದರು. ಬಿಂದಾಸ್ ಶ್ರೀನಿವಾಸ್, ವಿ.ಕೆ.ರಾಧಾ, ಚಂದ್ರಶೇಖರ್, ಹೊನ್ನೇಗೌಡ, ಶಿವನಂಜಯ್ಯ, ಮಹದೇವು ಇದ್ದರು.
Published on
ಮದ್ದೂರು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಭಾರತ್ ವಿಕಾಸ್ ಪರಿಷತ್ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ ತಿಳಿಸಿದರು.
ನಗರದ ಭಾರತ್ ವಿಕಾಸ್ ಪರಿಷತ್ ಸೇವಾಟ್ರಸ್ಟ್ ಕಚೇರಿಯಲ್ಲಿ ಭಾರತ್ ವಿಕಾಸ್ ಪರಿಷತ್ ಸೇವಾಟ್ರಸ್ಟ್, ರೋಟರಿ ಸಂಸ್ಥೆ, ಅನನ್ಯ ಹಾರ್ಟ್ ಸಂಸ್ಥೆ, ಐಕ್ಯ ಅಲೆಯನ್ಸ್ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ, ಮಹಿಳೆಯರಿಗೆ ಹೊಲಿಗೆ ಮತ್ತು ಬ್ಯೂಟಿ ಪಾರ್ಲರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತವಾಗಿ 2 ತಿಂಗಳು ಹೊಲಿಗೆ ಹಾಗೂ 1 ತಿಂಗಳು ಬ್ಯೂಟಿ ಪಾರ್ಲರ್ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯಲು ವಯಸ್ಸಿನ ಅಂತರವಿಲ್ಲ. ಉತ್ತಮ ತರಬೇತುದಾರರಿಂದ ತರಬೇತಿ ನೀಡುವ ಜತೆಗೆ ಪ್ರಮಾಣಪತ್ರವನ್ನು ನೀಡುತ್ತಿರುವುದರಿಂದ ಮಹಿಳೆಯರು ತರಬೇತಿಯ ಉಪಯೋಗ ಪಡೆದುಕೊಳ್ಳಬೇಕೆಂದರು.
ರೋಟರಿ ಅಧ್ಯಕ್ಷ ಬಿಂದಾಸ್ ಶ್ರೀನಿವಾಸ್ ಮಾತನಾಡಿ, ಹೊಲಿಗೆ ಹಾಗೂ ಬ್ಯೂಟಿ ಪಾರ್ಲರ್ ತರಬೇತಿ ಜತೆಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡು ಶ್ವಾಸಕೋಸ, ಇಸಿಜಿ, ಕಣ್ಣಿನ ತಪಾಸಣೆ, ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ಕಾಯಿಲೆ ಇನ್ನಿತರ ರೋಗಗಳ ತಪಾಸಣೆ ಮಾಡಲಾಯಿತು. ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಶಿಬಿರದ ಸದುಪಯೋಗಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕರಾದ ಮಹದೇವು, ವಿ.ಕೆ.ರಾಧಾ, ಚಂದ್ರಶೇಖರ್, ಹೊನ್ನೇಗೌಡ, ಶಿವನಂಜಯ್ಯ ಚನ್ನಸಂದ್ರ ಮಹದೇವು, ಅನುಪಮ, ತಿಪ್ಪೂರು ರಾಜೇಶ್, ಪ್ರವೀಣ್, ಎಸ್.ಪಿ.ದೀಪಕ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net