ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆಯ ಕೊಲೆ

ಮಳವಳ್ಳಿ ತಾಲೂಕಿನ ಕಿರುಗಾವಲು ಸಂತೆ ಮೈದಾನದ ಮಾರುಕಟ್ಟೆಯ ಮಹಿಳೆ ಹತ್ಯೆ ಸ್ಥಳವನ್ನು ಪೊಲೀಸರು ಶುಕ್ರವಾರ ಪರಿಶೀಲಿಸಿದರು
ಮಳವಳ್ಳಿ ತಾಲೂಕಿನ ಕಿರುಗಾವಲು ಸಂತೆ ಮೈದಾನದ ಮಾರುಕಟ್ಟೆಯ ಮಹಿಳೆ ಹತ್ಯೆ ಸ್ಥಳವನ್ನು ಪೊಲೀಸರು ಶುಕ್ರವಾರ ಪರಿಶೀಲಿಸಿದರು
Published on
ಮಳವಳ್ಳಿ: ತಾಲೂಕಿನ ಕಿರುಗಾವಲು ಸಂತೆಮಾಳದ ಎಪಿಎಂಸಿ ಮಾರುಕಟ್ಟೆ ಸಂಕೀರ್ಣದಲ್ಲಿ ಶುಕ್ರವಾರ ರಾತ್ರಿ ಚಿಂದಿ ಆಯುವ ಮಹಿಳೆಯೊರ ತಲೆಯ ಮೇಲೆ ಕಲ್ಲಿ ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಮೈಸೂರು ಮೂಲದ ಚಾಮುಂಡಿ(56) ಮೃತ ಮಹಿಳೆ. ಇವರು ಹಲವು ವರ್ಷಗಳಿಂದ ಕಿರುಗಾವಲು ಗ್ರಾಮದಲ್ಲಿ ರಸ್ತೆ ಮತ್ತು ಅಂಗಡಿ ಮುಂಗಟ್ಟುಗಳ ಬಳಿ ಬಿಸಾಡುತ್ತಿದ್ದ ಅನುಪಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದುಕೊಂಡು ಗುಜರಿ ಅಂಗಡಿಗೆ ಮಾರಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಮಹಿಳೆ ಹೆಸರಿನಲ್ಲಿ ಕಿರುಗಾವಲು ಮತ್ತು ಮೈಸೂರಿನಲ್ಲಿ ನಿವೇಶನಗಳಿದ್ದು, ಈಕೆಗೆ ವಾಸಕ್ಕೆ ಮನೆ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮದ ಅಂಗಡಿಗಳ ಮುಂಭಾಗ ಅಥವಾ ಮೈಸೂರು ಮುಖ್ಯರಸ್ತೆ ಬದಿಯಲ್ಲಿರುವ ಎಪಿಎಂಸಿ ಮಾರುಕಟ್ಟೆ ಪಡಸಾಲೆ ಮೇಲೆ ಮಲಗುತ್ತಿದ್ದು, ಎಂದಿನಂತೆ ರಾತ್ರಿ ಮಲಗಿದ್ದಾಗ ದುಷ್ಕರ್ಮಿಗಳು ಆಕೆಯ ತಲೆಮೇಲೆ ದಪ್ಪದಾದ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ ತರಕಾರಿ ಮಾರಾಟಗಾರರು ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸಿ ಪರಿಶೀಲನೆ ನಡೆಸಲಾಗಿದೆ.
ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದು, ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net