ಎನ್‌ಎಸ್‌ಎಸ್ ಘಟಕಾಧಿಕಾರಿ ಜಿ.ಎಸ್.ಕುಮಾರಸ್ವಾಮಿ ಮಾತನಾಡಿ, ಭವಿಷ್ಯದ ವಿದ್ಯಾರ್ಥಿಗಳಿಗೆ ಮೊಬೈಲ್ ಹಿಡಿದರೆ ಬದುಕು ನಾಶ, ಪುಸ್ತಕ ಹಿಡಿದರೆ ಬದುಕು ಬಂಗಾರ ಎನ್ನುವುದಕ್ಕೆ ವಿವೇಕಾನಂದರಲ್ಲಿನ ಯೋಗ, ಆಧ್ಯಾತ್ಮ, ತಾರ್ಕಿಕ ಜಾಗೃತಿ ಸಂದೇಶದ ಚಿಂತನೆ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ವಿವೇಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಲಾಯಿತು. ಎನ್. ರವೀಂದ್ರ, ಎಸ್.ಡಿ. ಹರೀಶ್, ಎನ್.ಎ. ನಾಗೇಶ್, ಅರ್ಪಿತಾ, ಚಂದ್ರಿಕಾ, ಫಾಜಿಲಾ ಖಾನಂ ಉಪಸ್ಥಿತರಿದ್ದರು.