ಗ್ರಾಮದಲ್ಲಿನ ಪ್ರಮುಖ ಆಕರ್ಷಣೆ ಬೆಳತೂರು ಕೆರೆ. ಇದು ಸುಮಾರು 120 ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದು, 200 ಎಕರೆ ಅಚ್ಚುಕಟ್ಟೆ ಪ್ರದೇಶಕ್ಕೆ ನೀರುಣಿಸುತ್ತಿದೆ ಎಂಬುದು ವಿಶೇಷ. ಜತೆಗೆ ಜನರ ದೈನಂದಿನ ಕೆಲಸಕ್ಕೂ ಅನುಕೂಲವಾಗುತ್ತಿದೆ. ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘ, ಅಂಗನವಾಡಿ, ನ್ಯಾಯ ಬೆಲೆ, ಉಪ ಅಂಚೆ ಕಚೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದೆ. ಇನ್ನು ಗ್ರಾಮದಲ್ಲಿ ಪುರಾತನವಾದ ಸೋಮೇಶ್ವರ, ಆಂಜನೇಯಸ್ವಾಮಿ, ಪಟ್ಟಲದಮ್ಮ, ಚಾಮುಂಡೇಶ್ವರಿ, ಮಾರಮ್ಮ, ಮುನೇಶ್ವರ, ಹಳೆವೂರಮ್ಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿವೆ. ಗ್ರಾಮದ ಕೆರೆ ದಂಡದಲ್ಲಿರುವ ಸೋಮಶೇಶ್ವರ ದೇಗುಲ ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕೆರೆಯುತ್ತಿದ್ದು, ಈ ದೇಗುದಲ್ಲಿರುವ ಲಿಂಗ ಅತ್ಯಂತ ವಿಶೇಷ ಎಂದು ಹೇಳಲಾಗುತ್ತಿದೆ.