ಮಾರೇಗೌಡನಹಳ್ಳಿಯಲ್ಲಿ ಹೂ ನೀಡಿ ಸ್ವಾಗತ

ಸಮೀಪದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುತ್ತಿರುವ ಮುಖ್ಯಶಿಕ್ಷಕಿ ಶಕುಂತಲಾ ಮತ್ತು ಇತರರು.
ಸಮೀಪದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುತ್ತಿರುವ ಮುಖ್ಯಶಿಕ್ಷಕಿ ಶಕುಂತಲಾ ಮತ್ತು ಇತರರು.
Published on
ಹಲಗೂರು: ಸಮೀಪದ ಮಾರಗೌಡನಹಳ್ಳಿ ಗ್ರಾಮ ಸರ್ಕಾರಿ ಪ್ರೌಢಶಾಲೆಗೆ ಶಾಲೆಗೆ ಸೋಮವಾರ ಆಗಮಿಸಿದ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕಿ ಶಕುಂತಲಾ, ಶಿಕ್ಷಕರು ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ಚಾಕಲೇಟು, ಗುಲಾಬಿ ಹೂವು ನೀಡಿ ಸ್ವಾಗತಿಸಿದರು.
ಮುಖ್ಯಶಿಕ್ಷಕಿ ಶಕುಂತಲಾ ಮಾತನಾಡಿ, ಖಾಸಗಿ ಶಾಲೆಯ ವ್ಯಾಮೋ ಬಿಟ್ಟು ಸರ್ಕಾರಿ ಶಾಲೆಗೆ ಸೇರಿಸಲು ಆಸಕ್ತಿ ವಹಿಸುತ್ತಿರುವ ಪಾಲಕರಿಗೆ ಆಭಾರಿಯಾಗಿದ್ದೇವೆ. ಮೇ 18ರಿಂದ ದಾಖಲಾತಿ ಪ್ರಾರಂಭಿಸಿದ್ದೇವೆ. ಈಗಾಗಲೇ ಆಂಗ್ಲ ಮಾಧ್ಯಮಕ್ಕೆ 79 ಮಕ್ಕಳು, ಕನ್ನಡ ಮಾಧ್ಯಮಕ್ಕೆ 70 ಮಕ್ಕಳು ದಾಖಲಾಗಿದ್ದಾರೆ. ಪ್ರಸ್ತುತ ನಮ್ಮ ಶಾಲೆಯಲ್ಲಿ 550 ಮಕ್ಕಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ಕೃಷ್ಣೇಗೌಡ, ಲಿಂಗೇಗೌಡ, ಸಿದ್ದರಾಜು, ಎಂ.ಬಸವರಾಜು, ಡಿ.ಪಿ.ಮಹೇಶ್, ಹನುಮಯ್ಯ, ಮಂಜುಳಾ, ಸಹನಾ ,ಯಮುನಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net