ಕೆಆರ್‌ಎಸ್ ಹಿನ್ನೀರಿಗೆ ಕನ್ನ

ಕಾಮಗಾರಿ ಮಾಡಲು ಖಾಸಗಿ ಕಂಪನಿಯೊಂದ ಅಣೆಕಟ್ಟೆಯ ಮುಖ್ಯದ್ವಾರದ ಬಳಿಯ ಹಿನ್ನಿರಿಗೆ ಕನ್ನ ಹಾಕಿ ಸಾಗಣೆ ಟ್ಯಾಂಕರ್‌ಗೆ ನೀರು ತುಂಬಿಸುತ್ತಿರುವ ಚಿತ್ರ.
ಕಾಮಗಾರಿ ಮಾಡಲು ಖಾಸಗಿ ಕಂಪನಿಯೊಂದ ಅಣೆಕಟ್ಟೆಯ ಮುಖ್ಯದ್ವಾರದ ಬಳಿಯ ಹಿನ್ನಿರಿಗೆ ಕನ್ನ ಹಾಕಿ ಸಾಗಣೆ ಟ್ಯಾಂಕರ್‌ಗೆ ನೀರು ತುಂಬಿಸುತ್ತಿರುವ ಚಿತ್ರ.
Published on
ಕೆ.ಆರ್.ಸಾಗರ: ಮುಂಗಾರು ವಿಳಂಬವಾಗಿದ್ದು, ದಿನದಿಂದ ದಿನಕ್ಕೆ ಕೆ.ಆರ್.ಸಾಗರ ನೀರಿನ ಸಂಗ್ರಹ ಕುಸಿತ ಕಾಣುತ್ತಿದೆ. ಇದರ ನಡುವೆ ಕಾಮಗಾರಿ ಉದ್ದೇಶಕ್ಕಾಗಿ ಖಾಸಗಿ ಕಂಪನಿಯೊಂದು ಅಣೆಕಟ್ಟೆಯ ಮುಖ್ಯದ್ವಾರದ ಬಳಿಯ ಹಿನ್ನಿರಿನಿಂದ ಟ್ಯಾಂಕರ್ ಮೂಲಕ ನೀರು ಸಾಗಣೆ ಮಾಡುತ್ತಿದೆ.
ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಆತಂಕದಲ್ಲಿ ಜಿಲ್ಲಾಡಳಿತ ಇದೆ. ಆದರೆ ಖಾಸಗಿ ಕಂಪನಿಯೊಂದು ಟ್ರಾೃಕ್ಟರ್ ಬಳಸಿ ಟ್ಯಾಂಕರ್ ಮೂಲಕ ಹಿನ್ನಿರಿನಿಂದ ನೀರು ತುಂಬಿಕೊಂಡು ಸಾಗಣೆ ಮಾಡುತ್ತಿದೆ. ಇದನ್ನು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಅಣೆಕಟ್ಟೆಯಿಂದ ನೀರು ಸಾಗಿಸುತ್ತಿರುವುರಿಂದ ಕಾವೇರಿ ನೀರಾವರಿ ನಿಗಮ ಹಾಗೂ ಪೊಲೀಸರು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net