ಕೆ.ಆರ್.ಸಾಗರ: ಮಂಡ್ಯದಲ್ಲಿ ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಮಂಗಳವಾರ ಸಂಜೆಯಿಂದ ಪ್ರಸ್ತುತ ಬೆಳೆ ಮತ್ತು ಜಾನುವಾರುಗಳ ಉಪಯೋಗಕ್ಕೆ ಕೆ.ಆರ್.ಸಾಗರ ಡ್ಯಾಂನಿಂದ ಅಣೆಕಟ್ಟೆ ವ್ಯಾಪ್ತಿಯ ಹಾಗೂ ನದಿ ಪಾತ್ರದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ.
ರೈತರು ಬೆಳೆಗಳಿಗೆ ಮಾತ್ರ ನೀರು ಉಪಯೋಗಿಸುವಂತೆ ಕೋರಲಾಗಿದೆ. ಮೇ 13ರಂದು ಅಣೆಕಟ್ಟೆಯ ನೀರಿನ ಮಟ್ಟ 89.90 ಅಡಿಗೆ ತಲುಪಿದ್ದು, ಒಳಹರಿವು 45 ಕ್ಯೂಸೆಕ್, ಹೊರ ಹರಿವು 2,270 ಕ್ಯೂಸೆಕ್, 16.57 ಟಿಎಂಸಿ (ಗರಿಷ್ಠ 49.454 ಟಿಎಂಸಿ) ಇದೆ.