ಈ ಸಾಲಿಗೆ ಕಟ್ಟು ಪದ್ಧತಿಯಲ್ಲಿ 18 ದಿನ ನಾಲೆಗೆ ನೀರು ಹರಿಸಲಾಗುತ್ತದೆ. 12 ದಿನ ನಿಲ್ಲಿಸಲಾಗುತ್ತದೆ. ಕೆ.ಆರ್.ಸಾಗರ ಅಣೆಕಟ್ಟೆ ಯಿಂದ ಈಗ ನಾಲೆಗಳಲ್ಲಿ ಹರಿಸುತ್ತಿರುವ ನೀರನ್ನು ಕೇವಲ ಪ್ರಸ್ತುತ ಬೆಳೆದು ನಿಂತಿರುವ ಬೆಳಗಳೆಗೆ ಮಾತ್ರ ಉಪಯೋಗಿಸುವಂತೆ ರೈತರಿಗೆ ತಿಳಿಸಲಾಗಿದ್ದು, ಹೊಸ ಬೆಳೆಗಳನ್ನು ಹಾಕಿ ನೀರಿನ ಕೊರತೆಯಿಂದ ನಷ್ಟ ಉಂಟಾದರೆ ಕಾವೇರಿ ನೀರಾವರಿ ನಿಗಮ ಜವಾಬ್ದಾರಿಯಲ್ಲ ಎಂದು ಅಧೀಕ್ಷಕರ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.