ಶಿಕ್ಷಕರಿಂದ ಮಕ್ಕಳಿಗೆ ಆತ್ಮೀಯ ಸ್ವಾಗತ

1 ಎಂಎಲ್‌ವಿ 3 ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕ ಜಯಸ್ವಾಮಿ ಪಠ್ಯಪುಸ್ತಕ ವಿತರಣೆ ಮಾಡಿದರು. ಪವಿತ್ರಮ್ಮ, ನಾಗರಾಜು, ಸಾಮ್‌ವೆಲ್, ವಾಣಿ, ಸಾವಿತ್ರಮ್ಮ, ರತ್ನಮ್ಮ, ಮಹದೇವಸ್ವಾಮಿ, ಪ್ರಸಾದ್, ಶಿವಕುಮಾರ್, ಮಹೇಶ್ ಇದ್ದರು.
1 ಎಂಎಲ್‌ವಿ 3 ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕ ಜಯಸ್ವಾಮಿ ಪಠ್ಯಪುಸ್ತಕ ವಿತರಣೆ ಮಾಡಿದರು. ಪವಿತ್ರಮ್ಮ, ನಾಗರಾಜು, ಸಾಮ್‌ವೆಲ್, ವಾಣಿ, ಸಾವಿತ್ರಮ್ಮ, ರತ್ನಮ್ಮ, ಮಹದೇವಸ್ವಾಮಿ, ಪ್ರಸಾದ್, ಶಿವಕುಮಾರ್, ಮಹೇಶ್ ಇದ್ದರು.
Published on
ಮಳವಳ್ಳಿ: ಶೈಕ್ಷಣಿಕ ವರ್ಷ ಪ್ರಾರಂಭವಾದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಶಾಲೆಗಳ ಬಾಗಿಲು ತೆರೆದು ಶಿಕ್ಷಕರು, ಮಕ್ಕಳನ್ನು ಆತ್ಮೀಯವಾಗಿ ವಿವಿಧ ರೀತಿಯಲ್ಲಿ ಶುಭ ಕೋರಿ ಬರಮಾಡಿಕೊಂಡರು.
ಶಾಲೆಗಳ ದ್ವಾರಗಳಲ್ಲಿ ತಳಿರು-ತೋರಣಗಳನ್ನು ಕಟ್ಟಿ ಸಿಂಗರಿಸಿ ಮಕ್ಕಳ ಸ್ವಾಗತಕ್ಕೆ ಸಜ್ಜುಗೊಳಿಸಲಾಗಿತ್ತು. ಜಾಗೃತಿ ಜಾಥಾ, ಮಂಗಳವಾದ್ಯ, ಪೂರ್ಣಕುಂಭ ಮೆರವಣಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಗಳು ಜರುಗಿದವು. ಬಿ.ಜಿ.ಮೋಳೆ, ಕೆಪಿಎಸ್‌ಸಿ ಸರ್ಕಾರಿ ಪ್ರೌಢಶಾಲೆ ಸರಗೂರು, ಮಾರೇಹಳ್ಳಿ ಬಳಿ ಇರುವ ಆದರ್ಶ ವಿದ್ಯಾಲಯ ಶಾಲೆಗಳಿಗೆ ಬಿಇಒ ಉಮಾ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭಕೋರಿ ಮಾತನಾಡಿದರು.
ಶಿಕ್ಷಕರ ತರಬೇತಿ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಕಳೆದ ಸಾಲಿನಲ್ಲಿ ತಾಲೂಕಿಗೆ ಉತ್ತಮ ಫಲಿತಾಂಶ ದೊರೆತಿದ್ದು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಒತ್ತಾಸೆಯಿಂದ ಇಲ್ಲಿನ ಶಾಸಕರು ಮುತುವರ್ಜಿ ವಹಿಸಿ ಡಿಜಿಟಲೀಕರಣ ಶಿಕ್ಷಣದ ಜತೆಗೆ ಮೂಲಸೌಲಭ್ಯ ಒದಗಿಸಲು ಸುಮಾರು 60 ಕೋಟಿ ರೂ. ಗೂ ಹೆಚ್ಚಿನ ಅನುದಾನವನ್ನು ವಿವಿಧ ಕಂಪನಿಗಳಿಂದ ಸಿಎಸ್‌ಆರ್ ನಿಧಿಯಿಂದ ಕೊಡಿಸಿದ್ದಾರೆ. ಹಾಗಾಗಿ ಪಾಲಕರು ಯಾವುದೇ ಗೊಂದಲಗಳಿಗೆ ಒಳಗಾಗದೇ ಖಾಸಗಿ ಶಾಲೆಗಳಿಗೂ ಮಿಗಿಲಾದ ಶಿಕ್ಷಣ ಸಿಗುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನ ದಾಖಲಿಸುವಂತೆ ಮನವಿ ಮಾಡಿದರು.
ಪ್ರಸ್ತುತ ಶೈಕ್ಷಣಿಕ ವರ್ಷದ ಫಲಿತಾಂಶ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ನಿರೀಕ್ಷೆಯ ಗುರಿಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು
.
ಶಿಕ್ಷಕರ ಮಹಾಸಭೆ: ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ಮಹಾಸಭೆಯನ್ನು ಎಸ್‌ಡಿಎಂ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದು, ಎಲ್ಲ ಪಾಲಕರು ಮಕ್ಕಳನ್ನು ಶಾಲೆಗೆ ಗೈರಾಗದಂತೆ ನೋಡಿಕೊಳ್ಳುವ ಮೂಲಕ ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಕಾಳಜಿ ವಹಿಸುವಂತೆ ಮನವಿ ಮಾಡಿದರು.
ಮುಖ್ಯಶಿಕ್ಷಕ ಎಚ್.ಎಂ.ನಾಗೇಂದ್ರ ಮೂರ್ತಿ ಮಾತನಾಡಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ದಾಖಲಾತಿ ಆಂದೋಲನ ಜಾಥಾ ನಡೆಯಿತು.
ಶಿಕ್ಷಕರಾದ ಅಣ್ಣಯ್ಯ, ಮಮತಾ, ಜಯಮ್ಮ, ಪ್ರಿಯಾ, ಸುನಂದಾ, ಮನುಜ, ಪ್ರಕಾಶ್, ಗುಂಡಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾರ ನಿಂಗಮ್ಮ, ಶಿವಕುಮಾರ, ಮಹೇಶ್ ಇದ್ದರು.

ಪಠ್ಯಪುಸ್ತಗಳ ವಿತರಣೆ:ರಾಗಿಬೊಮ್ಮನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ನಂತರ ಪಠ್ಯಪುಸ್ತಗಳನ್ನು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಶಿಕ್ಷಕ ಜಯಸ್ವಾಮಿ, ಶಿಕ್ಷರಾದ ಪವಿತ್ರಮ್ಮ, ನಾಗರಾಜು, ಸಾಮ್‌ವೆಲ್, ಎಸ್‌ಡಿಎಂಸಿ ಸದಸ್ಯರಾದ ವಾಣಿ, ಸಾವಿತ್ರಮ್ಮ, ರತ್ನಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಪ್ರಸಾದ್, ಶಿವಕುಮಾರ್, ಮಹೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net