ಎಸ್‌ಎನ್‌ಐ ಸಾಂಸ್ಕೃತಿಕ ವೇದಿಕೆಯ 11ನೇ ವರ್ಷದ ನಾದೋಪಾಸನ ಸೇವೆಯಲ್ಲಿ ಕಲಾವಿದರಾದ ಪ್ರಮೋದ್, ಪದ್ಮನಾಭ ಸುಬ್ಬಣ್ಣ ಸುಶ್ರಾವ್ಯವಾಗಿ ಸ್ಯಾಕ್ಸೋಫೋನ್ ನುಡಿಸಿದರೆ ಕುಮಾರ್ ಮತ್ತು ಸಂಜಯ್ ಡೋಲು ನುಡಿಸಿ ಸಹಕಾರ ನೀಡಿದರು. ಮೀನ-ಚೈತ್ರಮಾಸದ ಹಸ್ತನಕ್ಷತ್ರದ ದಿನ ಪ್ರಮುಖವಾದ ಚೆಲ್ವ ತಿರುನಾರಾಯಣಸ್ವಾಮಿ ಭೂಲೋಕಕ್ಕೆ ಅವಿರ್ಭವಿಸಿದ ದಿನ ಏ.2 ರಂದು ಜಯಂತ್ಯುತ್ಸವ ನೆರವೇರುತ್ತದೆ. ಅಂದೇ ಕಲ್ಯಾಣಿಯಲ್ಲಿ ತೀರ್ಥಸ್ನಾನ, ಪಟ್ಟಾಭಿಷೇಕ ಮಹೋತ್ಸವ ಸ್ಥಾನಾಚಾರ್ಯರಿಗೆ ಮಾಲೆ ಮರ್ಯಾದೆ ನಡೆಯಲಿದೆ.