ಅಲಯನ್ಸ್‌ನ ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ, ಶರಣ ಪಾಪಯ್ಯ ಉಪಸ್ಥಿತರಿದ್ದರು. ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಮುಖ್ಯಸ್ಥ ಪ್ರತಿಭಾಂಜಲಿ ಡೇವಿಡ್ ವಿದ್ಯಾರ್ಥಿಗಳಿಗೆ ವಚನ ಹೇಳಿಕೊಟ್ಟರು. ಅಕಾಡೆಮಿ ಗಾಯಕರಾದ ಶಂಕರ್, ಹಂಸಾ, ಐಶ್ವರ್ಯಾ, ವಂದನಾ, ಸರಿತಾ, ಶಶಿಕಲಾ, ಕರಣ್‌ವೀರ್, ಸಂಗೀತಾ, ವಿಶ್ವಾಸ್, ಸಿಂಧುಶ್ರೀ ಅವರು ಸಿಹಿಯೂ ಇರುವ ತನಕ ಇರುವೆಗಳು ನೂರು, ಮಾಡಿ ಮಾಡಿ ಕೆಟ್ಟರು ಮನವಿಲ್ಲದೇ, ತಂದೆ ನೀನು ತಾಯಿ ನೀನು, ಇವನಾರವಾ ಇವನಾರವಾ ವಚನಗಳನ್ನು ಸುಸ್ರಾವ್ಯವಾಗಿ ಹಾಡಿ ರಂಜಿಸಿದರು.