ಫೈನಾನ್ಸ್ ಹಾವಳಿ ತಪ್ಪಿಸಲು ಒತ್ತಾಯ: ಕಕಜವೇಯಿಂದ ಎಸ್ಪಿಗೆ ಮನವಿ ಸಲ್ಲಿಕೆ

ಮಂಡ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ಕಕಜವೇಯಿಂದ ಮನವಿ ಸಲ್ಲಿಸಲಾಯಿತು.
ಮಂಡ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ಕಕಜವೇಯಿಂದ ಮನವಿ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ಫೈನಾನ್ಸ್ ಮತ್ತು ಬ್ಯಾಂಕ್‌ಗಳು ಮಿತಿಮೀರಿದ ಬಡ್ಡಿ ವಸೂಲಿ
  • ಮನೆಯ ಬಳಿ ಹೋಗಿ ಬೆದರಿಕೆ ಹಾಕುವುದು, ಅಶ್ಲೀಲ ಶಬ್ಧಗಳಿಂದ ನಿಂದನೆ

ಮಂಡ್ಯ: ಖಾಸಗಿ ಫೈನಾನ್ಸ್ ಮತ್ತು ಬ್ಯಾಂಕ್‌ಗಳು ಮಿತಿಮೀರಿದ ಬಡ್ಡಿ ವಸೂಲಿ ಜತೆಗೆ ಗೃಹಸಾಲ ಪಡೆದವರ ಮನೆಯ ಬಳಿ ಹೋಗಿ ಬೆದರಿಕೆ ಹಾಕುವುದು, ಅಶ್ಲೀಲ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ಮನವಿ ಸಲ್ಲಿಸಿದರು.

ಅತ್ಯಧಿಕ ಬಡ್ಡಿ ವಿಧಿಸುವ ಜತೆಗೆ ನೆರೆ ಹೊರೆ ಮನೆಯವರು ಕೇಳಿಸುವಂತೆ ಜೋರಾದ ಶಬ್ಧಗಳೊಂದಿಗೆ ಮಾನಹಾನಿ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಅದೆಷ್ಟು ಜನರು ಮಾನ ಮರ್ಯಾದೆಗೆ ಅಂಜಿ ಗ್ರಾಮಗಳನ್ನು ತ್ಯಜಿಸುತ್ತಿರುವುದು ಕಂಡುಬರುತ್ತಿದೆ. ಹಾಗಾಗಿ ಕ್ರಮ ವಹಿಸಬಹುದು. ಮದ್ದೂರು ನಗರದ ಪ್ರವಾಸಿ ಮಂದಿರ ವೃತ್ತ ಹಾಗೂ ಕೊಲ್ಲಿ ವೃತ್ತಗಳಲ್ಲಿ ದಿನೇ ದಿನೇ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು, ಯಾವುದೇ ಮಾರ್ಗಸೂಚಿ ಇಲ್ಲದೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಸಿಗ್ನಲ್ ದೀಪ ಅಳವಡಿಸಿ ಅನಾಹುತ ತಪ್ಪಿಸುವಂತೆ ಹಾಗೂ ಮೈಸೂರು-ಬೆಂಗಳೂರು ಹೆದ್ದಾರಿಯ ಪ್ರಮುಖ ಹೋಟೆಲ್ ಮುಂದೆ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದಕ್ಕೆ ಸಂಬಂಧಪಟ್ಟವರಿಗೆ ಸೂಚಿಸಿ ಸರಿಪಡಿಸುವಂತೆ ಕೋರಿದರು. ಮನವಿ ಸ್ವೀಕರಿಸಿದ ಎಸ್ಪಿ, ಸಮಸ್ಯೆಗಳ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ, ಯುವ ಘಟಕದ ಅಧ್ಯಕ್ಷ ವಿ.ಪಿ.ವಿಶ್ವಾಸ್, ವೆಂಕಟರಾಮ, ಪ್ರಕಾಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net