ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

 ಮಳವಳ್ಳಿ ತಾಲೂಕಿನ ರಾವಣಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನವಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಮರಿಮಾದಯ್ಯ ಅವರನ್ನು ಸಂಘದ ನಿರ್ದೇಶಕರಾದ  ರಮೇಶ್, ಎಂ.ಎಲ್.ಬಸವರಾಜು, ಸುರೇಶ, ಕೆ.ಸಿ.ವೆಂಕಟೇಶ, ಎನ್.ಶೋಭಾ, ನಾಗಮ್ಮ, ಭಾರತಿ, ನಾಗಮ್ಮ, ಆರ್.ಕೆ.ನಾಗರಾಜು  ಅಭಿನಂದಿಸಿದರು

Published on

ಮಳವಳ್ಳಿ:

ತಾಲೂಕಿನ ರಾವಣಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನವಾವಣೆಯಲ್ಲಿ ಮರಿಮಾದಯ್ಯ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಈ ಹಿಂದಿನ ಅಧ್ಯಕ್ಷ ರಮೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಮರಿಮಾದಯ್ಯ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಸಂಘದ ಕಾರ್ಯದರ್ಶಿ ನಂಜುಂಡಸ್ವಾಮಿ ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಎಂ.ಎಲ್.ಬಸವರಾಜು, ನಿರ್ದೇಶಕರಾದ ಮಲ್ಲೇಶ, ಸುರೇಶ, ಕೆ.ಸಿ.ವೆಂಕಟೇಶ, ಎನ್.ಶೋಭಾ, ನಾಗಮ್ಮ, ಭಾರತಿ, ನಾಗಮ್ಮ, ಆರ್.ಕೆ.ನಾಗರಾಜು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.
ಮುಖಂಡರಾದ ಶಿವಲಿಂಗಯ್ಯ, ಎಂ.ನಾಗಯ್ಯ, ಜಯರಾಮು, ನಂಜುಂಡಸ್ವಾಮಿ ಸೇರಿದಂತೆ ಇತರರು ಇದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net