ಜನ್ಮದಿನವನ್ನು ಪರಿಸರ ಸ್ನೇಹಿಯಾಗಿ ಆಚರಿಸಲಿ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮನವಿ

ಮಂಡ್ಯ ನಗರದ ಶಿವನಂಜಪ್ಪ ಉದ್ಯಾನದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ನೀಡಿ ಗೌರವಿಸಲಾಯಿತು.
ಮಂಡ್ಯ ನಗರದ ಶಿವನಂಜಪ್ಪ ಉದ್ಯಾನದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ನೀಡಿ ಗೌರವಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶಿವನಂಜಪ್ಪ ಉದ್ಯಾನದಲ್ಲಿ ದೇವರ ಕಾಡು ಬಳಗದಿಂದ ಸಾಮಾಜಿಕ ಚಟುವಟಿಕೆ
  • ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ
ಮಂಡ್ಯ: ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಜನ್ಮದಿನದ ಅಂಗವಾಗಿ ನಗರದ ಶಿವನಂಜಪ್ಪ ಉದ್ಯಾನದಲ್ಲಿ ದೇವರ ಕಾಡು ಬಳಗದಿಂದ ಸಾಮಾಜಿಕ ಚಟುವಟಿಕೆ ಆಯೋಜಿಸಲಾಗಿತ್ತು.
ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಚಿತ್ರಕೂಟ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಡಿವಿಜಿ ಕಗ್ಗ ಬಳಗ ಹಾಗೂ ಬೆಂಗಳೂರು ಕಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ, ಪೌರ ಕಾರ್ಮಿಕರಿಗೆ ಅಭಿನಂದನೆ- ಸಸ್ಯೋತ್ಸವ ಹಾಗೂ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಹಿರಿಯ ನಾಗರಿಕರು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಹಿತೈಷಿಗಳು ನನ್ನ ಜನ್ಮದಿನವನ್ನು ವಿವಿಧ ಸೇವಾ ಕಾರ್ಯಗಳ ಮೂಲಕ ಸಮಾಜಕ್ಕೆ ಸಮರ್ಪಿಸುತ್ತಿರುವುದು ಖುಷಿ ತಂದಿದೆ. ಪೌರಕಾರ್ಮಿಕರಿಗೆ ಅಭಿನಂದನೆ, ನಾಗರಿಕರಿಗೆ ಆರೋಗ್ಯ ತಪಾಸಣೆ, ಸಸ್ಯೋತ್ಸವ, ಸಂಗೀತೋತ್ಸವ ಮಾಡುತ್ತಿರುವುದು ಒಳ್ಳಯ ಕಾರ್ಯ. ಜನ್ಮದಿನವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಲಿ ಎಂದರು.
ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ದೇವರ ಕಾಡು ಬಳಗದ ಗಾಮನಹಳ್ಳಿ ಮಹದೇವಸ್ವಾಮಿ, ಸತ್ಯಪ್ಪ, ಉಮೇಶ್, ರಾಧಾಕೃಷ್ಣ, ಕೇಶವಮೂರ್ತಿ, ಕೃಷಿಕ್‌ಗೌಡ, ನಿತ್ಯಶ್ರೀ, ಟಿ.ಪಿ.ಪ್ರಕಾಶ್, ನಾಗಣ್ಣ, ಉಮೇಶ್, ಡಾ.ಸುಬ್ರಮಣ್ಯ, ಜಯರಾಂ, ಸತ್ಯಪ್ಪ, ತುಳಸೀಧರ್ ಇತರರಿದ್ದರು.
ಇದೇ ವೇಳೆ ಬೆಂಗಳೂರು ಕಿಮ್ಸ್ ಆಸ್ಪತ್ರೆಯ 33 ಜನ ವೈದ್ಯರ ತಂಡ ಕಣ್ಣು, ಮೂಲವ್ಯಾದಿ, ಹೃದಯ, ಬಿ.ಪಿ, ಷುಗರ್ ತಪಾಸಣೆ ಮಾಡಿದರು. 18 ಜನ ಪೌರಕಾರ್ಮಿಕರಿಗೆ ಸಮವಸ್ತ್ರ ನೀಡಿ ಗೌರವಿಸಲಾಯಿತು. ಅಂತೆಯೇ ಸಂಜೆ 20 ಜನ ಗಾಯಕರಿಂದ ಸಂಗೀತೋತ್ಸವ ಮನರಂಜನೆ ನೀಡಿತು. 9 ಹೊಸ ಮಾದರಿಯ ಔಷಧ ನೆಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net