ಸಮುದಾಯ ಭವನಕ್ಕೆ ಟ್ರಸ್ಟ್ ಆರ್ಥಿಕ ನೆರವು

ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ನಂದೀಶ್‌ಗೌಡ  ಭೂಮಿ ಪೂಜೆ ನೆರವೇರಿಸಿದರು. ರಮೇಶ್, ಚಿಕ್ಕೋನು,  ಬಿ.ಕೃಷ್ಣ,  ಚೆಲುವರಾಜು, ರಾಮಲಿಂಗಯ್ಯ, ರಾಜಣ್ಣ, ಕಮಲಾಕ್ಷಿ ಚೆಲುವರಾಜು, ಸೋಮಶೇಖರ್, ಅಂಕಪ್ಪ , ಕುಮಾರ, ರಾಮಣ್ಣ, ತಿಮ್ಮಯ್ಯ, ಸುರೇಶ್, ಕುಮಾರ್ ಸುರೇಶ್ ಇದ್ದರು.
ಮದ್ದೂರು ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ನಂದೀಶ್‌ಗೌಡ ಭೂಮಿ ಪೂಜೆ ನೆರವೇರಿಸಿದರು. ರಮೇಶ್, ಚಿಕ್ಕೋನು, ಬಿ.ಕೃಷ್ಣ, ಚೆಲುವರಾಜು, ರಾಮಲಿಂಗಯ್ಯ, ರಾಜಣ್ಣ, ಕಮಲಾಕ್ಷಿ ಚೆಲುವರಾಜು, ಸೋಮಶೇಖರ್, ಅಂಕಪ್ಪ , ಕುಮಾರ, ರಾಮಣ್ಣ, ತಿಮ್ಮಯ್ಯ, ಸುರೇಶ್, ಕುಮಾರ್ ಸುರೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಎಚ್.ಕೆ.ನಂದೀಶ್‌ಗೌಡ ಹೇಳಿಕೆ
ಮದ್ದೂರು: ತಾಲೂಕಿನ ಹುಳಗನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಗತ್ಯ ಆರ್ಥಿಕ ಸಹಕಾರ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಚ್.ಕೆ.ನಂದೀಶ್‌ಗೌಡ ತಿಳಿಸಿದರು.
ಹುಳಗನಹಳ್ಳಿ ಗ್ರಾಮದಲ್ಲಿ ಗುರುವಾರ ಸಮುದಾಯ ಭವನದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಜಯ ಗಳಿಸಿದ ಸಂದರ್ಭದಲ್ಲಿ ಗ್ರಾಮದ ಮಂಚಮ್ಮ ದೇಗುಲದ ಮುಂದೆ ಸಮುದಾಯ ಭವನ ನಿರ್ಮಿಸಿ ಕೊಡುವ ಬಗ್ಗೆ ಭರವಸೆ ನೀಡಿದ್ದೆ. ಅದರಂತೆ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ಸಹಕಾರ ನೀಡುತ್ತಿದ್ದೇನೆ ಎಂದರು.
ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಹಣದಿಂದಲೇ ಸಮುದಾಯ ಭವನಕ್ಕೆ ಅಡಿಪಾಯ ಹಾಕಲಾಗುವುದು ಎಂದರು.
ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಹೆಮ್ಮನಹಳ್ಳಿ ಗ್ರಾಪಂ ವತಿಯಿಂದ ಸ್ವಂತ ಹಣದಲ್ಲಿ ಮಕ್ಕಳಿಗೆ ಮೊಟ್ಟೆ, ಸ್ಕೂಲ್ ಬ್ಯಾಗ್, ಪಠ್ಯ ಪರಿಕರ, ಸೈಕಲ್, ಸರ್ಕಾರಿ ಶಾಲೆಗಳ ಕೊಠಡಿಗಳ ನಿರ್ಮಾಣಕ್ಕೆ, ಶುದ್ಧ ಕುಡಿಯುವ ನೀರಿನ ಘಟಕ್ಕೆ, ಬೀದಿ ದೀಪ ಅಳವಡಿಕೆ ಆರ್ಥಿಕ ಸಹಾಯ ಮಾಡಲಾಗಿದೆ, ಹಲವಾರು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶಗಳ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಹುಳಗನಹಳ್ಳಿ ಸೇರಿದಂತೆ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಟ್ರಸ್ಟ್ ವತಿಯಿಂದ ಮುಂದೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ರಮೇಶ್, ಚಿಕ್ಕೋನು, ಬಿ.ಕೃಷ್ಣ, ಚೆಲುವರಾಜು, ರಾಮಲಿಂಗಯ್ಯ, ರಾಜಣ್ಣ, ಕಮಲಾಕ್ಷಿ ಚೆಲುವರಾಜು, ಸೋಮಶೇಖರ್, ಅಂಕಪ್ಪ , ಕುಮಾರ, ರಾಮಣ್ಣ, ತಿಮ್ಮಯ್ಯ, ಸುರೇಶ್, ಕುಮಾರ್ ಸುರೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net