ಡಾ.ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ

ಮದ್ದೂರು ನಗರದ ಶರಣರ ಸಂಘಟನೆಯ ವೇದಿಕೆಯ ಕಚೇರಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಎಸ್.ಎಂ.ಗಂಗಾಧರ್, ಕಲ್ಲೇಶ್‌ಕುಮಾರ್, ನಟರಾಜ್, ಬಸವಣ್ಣ, ಗಿರೀಶ್, ರಶ್ಮಿ, ನಾಗೇಶ್, ಶಿಲ್ಪವಿಶ್ವನಾಥ್, ನಾಗರತ್ನ, ಎಂ.ಎನ್.ಬಸವಣ್ಣ ಇದ್ದರು.

Published on
ಮದ್ದೂರು:: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರು ಸುಧೀರ್ಘವಾದ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕರ್ತವ್ಯನಿರ್ವಹಿಸಿ ಸಹಸ್ರಾರು ಮಂದಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಶರಣರ ಸಂಘಟನೆ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಂ.ಗಂಗಾಧರ ಬಣ್ಣಿಸಿದರು.
ನಗರದ ಶರಣರ ಸಂಘಟನೆಯ ವೇದಿಕೆಯ ಕಚೇರಿಯಲ್ಲಿ ಸೋಮವಾರ ಶಾಮನೂರು ಶಿವಶಂಕರಪ್ಪ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಡಾ.ಶಾಮನೂರು ಶಿವಶಂಕರಪ್ಪ ಅವರು ಜನ ಕಲ್ಯಾಣ ಟ್ರಸ್ಟ್ ಮೂಲಕ ಹಲವಾರು ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದರು.
ವೀರಶೈವ ವೇದಿಕೆಯ ಕಲ್ಲೇಶ್‌ಕುಮಾರ್, ನಟರಾಜ್, ಬಸವಣ್ಣ, ಗಿರೀಶ್, ರಶ್ಮಿ, ನಾಗೇಶ್, ಶಿಲ್ಪವಿಶ್ವನಾಥ್, ನಾಗರತ್ನಾ, ಎಂ.ಎನ್.ಬಸವಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net