ನಿಷ್ಠಾವಂತ ಪತ್ರಕರ್ತ ಹಿಂದೂ ರಾಮಯ್ಯ: ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಬಣ್ಣನೆ

ಮಂಡ್ಯದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜನೆ
  • ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಸೇರಿದಂತೆ ಹಲವರು ಭಾಗಿ
ಮಂಡ್ಯ: ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ ಅಂದಿನ ಎಲ್ಲ ಸರ್ಕಾರ ಹಾಗೂ ರಾಜಕಾರಣಿಗಳ ಮುಲಾಜಿಗೆ ಒಳಪಡದೆ ಶಕ್ತಿಯುತವಾಗಿ ಪತ್ರಿಕಾ ವೃತ್ತಿಯಲ್ಲಿ ತಮ್ಮದೇ ಛಾಪು ಮೂಡಿಸಿದ ಪಿ.ರಾಮಯ್ಯ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಹೇಳಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಚಿತ್ರಕೂಟದ ವತಿಯಿಂದ ಆಯೋಜಿಸಿದ್ದ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನಾಡು ಕಂಡ ಒಬ್ಬ ನಿಷ್ಠಾವಂತ ಹಾಗೂ ಧೈರ್ಯವಂತ ಪತ್ರಕರ್ತ ಪಿ.ರಾಮಯ್ಯ ಅವರು ಮಂಡ್ಯ ಜಿಲ್ಲೆಯ ಚೇತನ. ದಿ ಹಿಂದೂ ಪತ್ರಿಕೆಯಲ್ಲಿ ಐದು ದಶಕ ಸೇವೆ ಸಲ್ಲಿಸಿದ ಆ ಸಂಸ್ಥೆಯಿಂದ ಮೆಚ್ಚುಗೆ ಪಡೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ತಮ್ಮ ಸ್ವಂತ ಕೆಲಸಕ್ಕೆ ಬಳಕೆ ಮಾಡಿಕೊಳ್ಳದೇ ಇಡೀ ಬದುಕನ್ನು ಸವೆಸಿದರು. ಮಂಡ್ಯ ಜಿಲ್ಲೆಯ ಜನ ಹಾಗೂ ವಿಶೇಷವಾಗಿ ನಾಗಮಂಗಲ ಜನರೆಂದರೆ ಎಲ್ಲಿಲ್ಲದ ಪ್ರೀತಿ, ಅವರನ್ನು ನೆನಪಿಸಿಕೊಂಡೇ ಭಾವುಕರಾಗಿ ಬಿಡುತ್ತಿದ್ದರು ಎಂದರು.
ರಾಮಯ್ಯ ಅವರು ವಿಶೇಷವಾಗಿ ಸರಳವಾಗಿ ಆಂಗ್ಲ ಭಾಷೆ ಬಳಸುತ್ತಿದ್ದರು. ಕ್ರೀಡೆ, ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯ ವಿಶೇಷತೆ ಏನೆಂದರೆ ಸರ್ ಸಿ.ವಿ.ರಾಮನ್ ಅವರ ಸಂದರ್ಶನ ಮಾಡಿದವರು ಈ ನಾಡಿನಲ್ಲಿ ಯಾರಾದರೂ ಇದ್ದರೆ ಅವರೇ ರಾಮಯ್ಯ ಎನ್ನಬಹುದು ಎಂದು ವಿವರಿಸಿದರು.
ಸಂತೋಷದಿಂದ ನಗುನಗುತ್ತಾ ಇದ್ದ ರಾಮಯ್ಯ ಅವರು ಸುತ್ತಮುತ್ತಲ ಪ್ರದೇಶದ ಸ್ನೇಹಿತರನ್ನೂ ವಿಶ್ವಾಸದಿಂದ ಕಂಡ ಮಹಾನ್ ವ್ಯಕ್ತಿ. ಅವರ ಜ್ಞಾಪಕ ಶಕ್ತಿ ಅಪಾರವಾಗಿತ್ತು. ಯಾವುದೇ ಸನ್ನಿವೇಶ, ಘಟನೆಗಳನ್ನು ತಪ್ಪಾಗದ ಹಾಗೆ ಹೇಳುತ್ತಿದ್ದಂತಹ ಜ್ಞಾನ ಸಂಪತ್ತು ಅವರಲ್ಲಿತ್ತು. ಕಾವೇರಿ ನೀರಿನ ವಿಷಯದಲ್ಲಿ ಬೆಂಗಳೂರಿಗೆ ಮೊದಲು ಕುಡಿಯಲು ನೀರು ಕೊಡಿ, ಆನಂತರ ತಮಿಳುನಾಡಿಗೆ ನೀರು ಎಂಬ ದನಿ ಎತ್ತಿದ ನಾಯಕರಾದ ಶ್ರೀನಿವಾಸ್, ಎಚ್.ಡಿ.ದೇವೇಗೌಡ ಸೇರಿದಂತೆ ಪಿ.ರಾಮಯ್ಯ ಅವರು ಸಹ ಪ್ರಮುಖರಾಗಿ ಕಾಣುತ್ತಾರೆ ಎಂದು ಸ್ಮರಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಹಿರಿಯ ಪತ್ರಕರ್ತ ಚೈತನ್ಯಕುಮಾರ್, ಭಗವಾನ್ ಚಕ್ರವರ್ತಿ, ಪರಿಚಯ ಪ್ರಕಾಶನದ ಶಿವಕುಮಾರ್ ಆರಾಧ್ಯ, ಅರವಿಂದ ಪ್ರಭು, ಧನುಷ್‌ಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net