ಸ್ವಚ್ಛ ಭಾರತ್ ಮಿಷನ್‌ನ ಅಧಿಕಾರಿಗಳ ಕಾರ್ಯ ವೈಖರಿ, ಪ್ರಯತ್ನ, ಪರಿಶ್ರಮ, ಬಹಳ ಮುಖ್ಯ. ಸ್ವಚ್ಛ ಭಾರತ್ ಮಿಷನ್(ನಗರ ) 2.0 ಯೋಜನೆಯಡಿ ಬರುವ ಮಾನದಂಡ ಮತ್ತು ಸೂಚನೆಗಳನ್ನು ಪಾಲಿಸುವ ಮೂಲಕ ನಗರಕ್ಕೆ ಒಳ್ಳೆಯ ಹೆಸರು ತರುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು. ಸ್ವಚ್ಛತೆಯು ಸಾಮಾಜಿಕ ಹೊಣೆಗಾರಿಕೆ ಆಗಿದೆ. ಆದ್ದರಿಂದ ಸುಸ್ಥಿತ ಸಮಾಜದಲ್ಲಿ ನಗರದ ಜನರು ಪ್ರಜ್ಞಾವಂತರಾಗಿ ಬುದ್ದಿವಂತರಾಗಿ ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಹಾಗೂ ಜಾಗೃತಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.