ಕೆ.ಎಂ.ಜಗದೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಮಹೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಪುಟ್ಟೇಗೌಡ ಕಾರ್ಯ ನಿರ್ವಹಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ.ಎಂ.ಅಧ್ಯಕ್ಷ, ಉಪಾಧ್ಯಕ್ಷ ನಾರಾಯಣ, ನಿರ್ದೇಶಕರಾದ ಶಿವಲಿಂಗಯ್ಯ, ಆರ್.ಎಲ್.ರವಿಶಂಕರ್, ನಾಗೇಶ್, ಚಂದ್ರಶೇಖರ್, ಉಮೇಶ್, ಮರಿಸ್ವಾಮಿ, ಲಕ್ಷ್ಮೀ, ಸುಜಾತಾ ಇದ್ದರು.