ಕಲ್ಯಾಣಿಯ ನಾಲ್ಕು ಕಡೆಯ ಸೋಪಾನಗಳು, ಸಾಲುಮಂಟಪಗಳ ಮೇಲ್ಭಾಗ ಧಾರಾಮಂಟಪಗಳ ಮೇಲೆ ಕಳೆದ ಬಾರಿಗಿಂತಲೂ ಈ ಬಾರಿ ಕಿಕ್ಕಿರಿದು ಭಕ್ತರು ಸೇರಿದ್ದರು. ಐವತ್ತು ಸಾವಿರಕ್ಕೂ ಹೆಚ್ಚಿದ್ದ ಭಕ್ತರ ಜಯಘೋಷಗಳ ನಡುವೆ ಸ್ನಪನಶೆಲ್ವರಿಗೆ ಭಕ್ತರ ಇಷ್ಟಾರ್ಥ ಈಡೇರಿಕೆ, ನಾಡಿನ ಸುಭೀಕ್ಷೆ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕ ಮಾಡಲಾಯಿತು. ಕಲ್ಯಾಣಿ ತಾಯಿಗೆ ಪೂಜೆ ನೆರವೇರಿಸಿ ಸ್ನಪ್ನಶೆಲ್ವರನ್ನು ಕಲ್ಯಾಣಿಗೆ ಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು.