ಮಂಟೇಸ್ವಾಮಿ ಜಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್

ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಮಂಟೇಸ್ವಾಮಿ ಮಠದ ಆವರಣದಲ್ಲಿ ಎದುರು ಸೇವೆ ಜಾತ್ರಾ ಮಹೋತ್ಸವ ಸಂಬಂಧ ಭಾನುವಾರ ಕರೆಯಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಡಿವೈಎಸ್‌ಪಿ ಯಶವಂತ್‌ಕುಮಾರ್ ಮಾರನಾಡಿದರು. ಪೀಠಾಧಿಕಾರಿ ಜ್ಞಾನಾನಂದ ಚಂನ್ನರಾಜೇ ಅರಸು, ಪಿಎಸ್‌ಐ ಪ್ರಕಾಶ್, ಚೇತನ್ ರಾಜೇ ಅರಸು, ಭರತ್ ರಾಜೇ ಅರಸು ಇತರರು ಇದ್ದರು.
ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಮಂಟೇಸ್ವಾಮಿ ಮಠದ ಆವರಣದಲ್ಲಿ ಎದುರು ಸೇವೆ ಜಾತ್ರಾ ಮಹೋತ್ಸವ ಸಂಬಂಧ ಭಾನುವಾರ ಕರೆಯಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಡಿವೈಎಸ್‌ಪಿ ಯಶವಂತ್‌ಕುಮಾರ್ ಮಾರನಾಡಿದರು. ಪೀಠಾಧಿಕಾರಿ ಜ್ಞಾನಾನಂದ ಚಂನ್ನರಾಜೇ ಅರಸು, ಪಿಎಸ್‌ಐ ಪ್ರಕಾಶ್, ಚೇತನ್ ರಾಜೇ ಅರಸು, ಭರತ್ ರಾಜೇ ಅರಸು ಇತರರು ಇದ್ದರು.
Published on

ಡಿವೈಎಸ್ಪಿ ಎಸ್.ಬಿ.ಯಶವಂತ ಹೇಳಿಕೆ

ಮಳವಳ್ಳಿ: ಮಂಟೇಸ್ವಾಮಿ ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಬಂದೋಬಸ್ತ್‌ಗಾಗಿ ಪೊಲೀಸ್ ಇಲಾಖೆ ಕೈಗೊಳ್ಳುವ ಕ್ರಮಗಳಿಗೆ ಸ್ಥಳೀಯರ ಸಹಕಾರ ನೀಡುವಂತೆ ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್ ತಿಳಿಸಿದರು.
ತಾಲೂಕಿನ ಬೆಳಕವಾಡಿ ಸಮೀಪದ ಬಿ.ಜಿ.ಪುರ ಗ್ರಾಮದಲ್ಲಿ ನಡೆಯುವ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಜಾತ್ರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಂಟೇಸ್ವಾಮಿ ಮಠದ ನೀಲಗಾರ ಪರಂಪರೆಗೆ 800 ವರ್ಷಗಳ ಇತಿಹಾಸವಿದ್ದು, ಮಾ.18 ರಂದು ನಡೆಯಲಿರುವ ಎದುರು ಸೇವೆ ಜಾತ್ರಾ ಮಹೋತ್ಸವದಲ್ಲಿ ನಿರೀಕ್ಷೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗೆ 15 ರಿಂದ 20 ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ 550 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಲಾಗುವುದು. ಮಠ ನುಗ್ಗುವ ವೇಳೆ ನೀಲಗಾರರು ಎದುರಾಗುವ ಸಂದರ್ಭದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ನಿಯೋಜನೆ ಮಾಡಲಾಗುವುದು. ಇದಕ್ಕೆ ಪೂರಕವಾಗಿ ಸ್ಥಳೀಯರು ಸಹಕಾರ ನೀಡಬೇಕೆಂದರು.
ಶ್ರೀ ಮಠದ ಪೀಠಾಧಿಪತಿ ಜ್ಞಾನಾನಂದ ಚೆನ್ನರಾಜೇ ಅರಸ್ ಮಾತನಾಡಿ, ಮಠದ ಪರಂಪರೆಯಲ್ಲಿ ಮಳವಳ್ಳಿ ಮತ್ತು ಬೊಪ್ಪೇಗೌಡನಪುರ ಮಠಗಳು ಪ್ರಮುಖವಾಗಿದ್ದು, ಕಪ್ಪಡಿ ಜಾತ್ರೆ ಮುಗಿಸಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು ಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಇನ್ನುಳಿದಂತೆ ಭಕ್ತಾದಿಗಳಿಗೆ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ವಿದ್ಯುತ್ ಸಂಪರ್ಕ ಮೊದಲಾದ ವ್ಯವಸ್ಥೆಗಳನ್ನು ಮಾಡುವ ಮೂಲಕ ವಾಡಿಕೆಯಂತೆ ತಾಲೂಕು ಆಡಳಿತ ಮತ್ತು ಪೊಲೀಸ್, ಸೆಸ್ಕ್ ಇಲಾಖೆಗಳು ಸಹಕಾರ ನೀಡಬೇಕು ಎಂದರು.
ಸಭೆಯಲ್ಲಿ ಉಪ ತಹಸೀಲ್ದಾರ್ ಶಂಕರ್, ಮಂಟೇಸ್ವಾಮಿ ಮಠದ ಭರತ್ ರಾಜೇ ಅರಸ್, ಚೇತನ್ ರಾಜೇ ಅರಸ್, ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಪಿಎಸ್‌ಐ ಬಿ.ವಿ.ಪ್ರಕಾಶ್, ಗ್ರಾಪಂ ಆಡಳಿತಾಧಿಕಾರಿ ನಿತೀಶ್, ಪಿಡಿಒ ಕೇಶವಮೂರ್ತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಂಜಿನಿಯರ್ ಅಶೋಕ್‌ಕುಮಾರ್ , ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net